ಶ್ರೀಗಂಧ ಕಳ್ಳರ ಬಂಧನ
ಕೆ.ಆರ್. ನಗರ: ಇಲ್ಲಿನ ಹೊರವಲಯದಲ್ಲಿರುವ ಅರ್ಕೇಶ್ವರಸ್ವಾಮಿ ದೇವಾಲಯದ ಬಳಿ ಇತ್ತೀಚೆಗೆ ಇಬ್ಬರು ಶ್ರೀಗಂಧ ಚೋರರನ್ನು ಬಂಧಿಸಿ ಸುಮಾರು 20 ಕೆ.ಜಿ ಶ್ರೀಗಂಧದ ಮರದ ತುಂಡುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಅನುಮಾನಾಸ್ಪದವಾಗಿ ಬೈಕ್ನಲ್ಲಿ ಸಂಚರಿಸುತ್ತಿದ್ದ ತಾಲೂಕಿನ ಗುಳುವಿನ ಅತ್ತಿಗುಪ್ಪೆ ಗ್ರಾಮದ ರಾಜು, ನಾಗರಾಜು, ಸ್ವಾಮೀಗೌಡ, ಲೋಕೇಶ, ಹೊಳೆನರಸೀಪುರ ತಾಲೂಕು ಯಡಹಳ್ಳಿ ಗ್ರಾಮದ ದಿವಾಕರ ಎಂಬವರನ್ನು ರಾತ್ರಿ ಗಸ್ತಿನಲ್ಲಿದ್ದ ಪೊಲೀಸರು ತಡೆದು ತಪಾಸಣೆ ನಡೆಸಿದಾಗ ಈ ಕೃತ್ಯ ಬಯಲಾಗಿದೆ.
ಪೊಲೀಸರನ್ನು ಕಂಡ ಕೂಡಲೇ ಸ್ವಾಮೀಗೌಡ, ದಿವಾಕರ, ಲೋಕೇಶ ಶ್ರೀಗಂಧದ ತುಂಡುಗಳಿದ್ದ ಚೀಲವನ್ನು ಎಸೆದು ಪರಾರಿಯಾದರು. ನಂತರ ಪೊಲೀಸರ ಕೈಗೆ ಸಿಕ್ಕಿಬಿದ್ದ ರಾಜು, ನಾಗರಾಜು ಅವರನ್ನು ಠಾಣೆಗೆ ಕರೆತಂದು ವಿಚಾರಣೆ ಮಾಡಿದಾಗ, ತಮ್ಮ ಬಳಿ ಇದ್ದ 15 ಕೆ.ಜಿ ಶ್ರೀಗಂಧದ ತುಂಡುಗಳ ಜತೆಗೆ ಗುಳುವಿನತ್ತಿಗುಪ್ಪೆಯ ಸ್ವಾಮಿಗೌಡನ ಮನೆಯಲ್ಲಿ 5 ಕೆ.ಜಿ ತುಂಡುಗಳಿರುವುದನ್ನು ತಿಳಿಸಿದ್ದಾರೆ.
ಕೂಡಲೆ ಪೊಲೀಸರು ಸ್ವಾಮಿಗೌಡನ ಮನೆಯಿಂದ 5 ಕೆ.ಜಿ ಶ್ರೀಗಂಧ ವಶಪಡಿಸಿಕೊಂಡರು. ಈ ಸಂಬಂಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.