ಗುಡಿಸಲಿಗೆ ಬೆಂಕಿ: ವೃದ್ಧೆ ಸಜೀವ ದಹನ
ನಂಜನಗೂಡು: ಗುಡಿಸಲಿಗೆ ಬೆಂಕಿ ಬಿದ್ದ ಪರಿಣಾಮ ಒಳಗಡೆ ಮಲಗಿದ್ದ ವೃದ್ಧೆ ಸಜೀವವಾಗಿ ದಹನವಾದ ಘಟನೆ ಭಾನುವಾರ ಬೆಳಗಿನ ಜಾವಾ ಪಟ್ಟಣದ ಅಶೋಕಪುರಂ ಬಡಾವಣೆಯಲ್ಲಿ ನಡೆದಿದೆ. ಪಟ್ಟಣದ ಅಶೋಕಪುರಂ ಬಡಾವಣೆಯಲ್ಲಿ 25 ವರ್ಷಗಳಿಂದ ವಾಸವಾಗಿದ್ದ ಅನಾಥೆ ಗೌರಮ್ಮ (65) ಮೃತಪಟ್ಟವರು. ಪತಿ ಕೃಷ್ಣಯ್ಯ ಅವರನ್ನು ಹಲವಾರು ವರ್ಷಗಳ ಹಿಂದೆಯೇ ಕಳೆದುಕೊಂಡಿದ್ದ ವೃದ್ಧೆ ಗೌರಮ್ಮ, ಪುಟ್ಟ ಗುಡಿಸಿಲಿನಲ್ಲಿ ಬದುಕು ನಡೆಸುತ್ತಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.