ಆಯುಕ್ತರ ವರ್ಗಾವಣೆ ಖಂಡಿಸಿ ಪ್ರತಿಭಟನೆ
ಮೈಸೂರು: ನಗರಪಾಲಿಕೆ ಆಯುಕ್ತರಾಗಿದ್ದ ಡಾ.ಎಂ.ಆರ್. ರವಿ ಅವರನ್ನು ವರ್ಗಾವಣೆ ಮಾಡಿರುವುದನ್ನು ಖಂಡಿಸಿ ವಿಶ್ವಮಾನವ ವಿದ್ಯಾರ್ಥಿ ಯುವ ವೇದಿಕೆಯವರು ನ್ಯಾಯಾಲಯದ ಎದುರಿನ ಗಾಂಧಿ ಪುತ್ಥಳಿ ಬಳಿ ಶನಿವಾರ ಪ್ರತಿಭಟಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ. ರಾಮದಾಸ್ ಅವರು ತಮ್ಮ ಪ್ರಭಾವ ಬಳಸಿ ಆಯುಕ್ತರನ್ನು ವರ್ಗಾವಣೆ ಮಾಡಿಸಿ, ತಮ್ಮ ರಾಜಕೀಯ ಪ್ರವೃತ್ತಿ ಬಿಂಬಿಸಿದ್ದಾರೆ. ಮುಖ್ಯಮಂತ್ರಿಯವರು ಈ ವಿಚಾರದಲ್ಲಿ ಮಧ್ಯಪ್ರವೇಶಿಸಿ ಆಯುಕ್ತರ ವರ್ಗಾವಣೆ ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.
ವೇದಿಕೆಯ ಕಾರ್ಯದರ್ಶಿ ನಂದೀಶ್ಕುಮಾರ್, ನಗರಾಧ್ಯಕ್ಷ ಮನೋಜ್, ಕಾರ್ಯಾಧ್ಯಕ್ಷ ಮೋಹನ್ಗೌಡ ಮುಖಂಡರಾದ ಶರತ್ಗೌಡ, ಸಿದ್ದರಾಜು, ಅಭಿ, ಅನಿಲ್, ವಿಶ್ವ, ಯೋಗೇಶ್, ಶಂಕರ್, ಅರುಣ್, ವಿಶ್ವ ಇತರರು ಇದ್ದರು.