ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿತರ ಸಭೆ

Parashurama
Updated On : 17 Feb 2013, 12:15 pm

ಹುಣಸೂರು: ಪುರಸಭೆ ಚುನಾವಣೆ ಹಿನ್ನೆಲೆ ತಾ. ಕಾಂಗ್ರೆಸ್ ಪಕ್ಷವು ಫೆ. 17ರ ಬೆಳಿಗ್ಗೆ 11ಕ್ಕೆ ಪಕ್ಷದ ಕಚೇರಿಯಲ್ಲಿ ಟಿಕೆಟ್ ಆಕಾಂಕ್ಷಿಗಳು, ವಿವಿಧ ಘಟಕದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಸಭೆ ನಡೆಯಲಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕುಮಾರಸ್ವಾಮಿ ತಿಳಿಸಿದ್ದಾರೆ.
ನಾಳೆ ಸಾಲ ವಸೂಲಾತಿ ಮೇಳ
ಟಿ. ನರಸೀಪುರ: ತಾಲೂಕಿನ ಬನ್ನೂರಿನ ಶ್ರೀರಂಗಪಟ್ಟಣ ರಸ್ತೆಯಲ್ಲಿರುವ ಎನ್.ಆರ್. ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಫೆ. 18ರ ಸೋಮವಾರ ಬೆಳಗ್ಗೆ 11ಕ್ಕೆ ಸಾಲ ವಸೂಲಾತಿ ಮೇಳ ನಡೆಯಲಿದೆ ಎಂದು ಬ್ಯಾಂಕಿನ ಅಧ್ಯಕ್ಷ ಕೆ. ವಜ್ರೇಗೌಡ ಹಾಗೂ ವ್ಯವಸ್ಥಾಪಕ ಎನ್.ಎಸ್. ದೇವರಾಜ್ ಅರಸ್ ಹೇಳಿದ್ದಾರೆ.  ತಾಲೂಕು ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ (ಪಿಎಲ್‌ಡಿ) ಬ್ಯಾಂಕ್ ವತಿಯಿಂದ ಸಾಲ ವಸೂಲಾತಿ ಮೇಳ ಹಮ್ಮಿಕೊಂಡಿದೆ. ಬನ್ನೂರು ಹೋಬಳಿ ಸೇರಿದಂತೆ ಸಮೀಪದ ಕಸಬಾ ಮತ್ತು ಸೋಸಲೆ ಹೋಬಳಿಗಳ ವ್ಯಾಪ್ತಿಯ ಗ್ರಾಮಗಳಲ್ಲಿ ಸಾಲ ಪಡೆದುಕೊಂಡಿರುವ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಸಾಲ ಪಾವತಿ ಮಾಡಿ ವಿಶೇಷ ಸೌಲಭ್ಯ ಪಡೆದುಕೊಳ್ಳಬಹುದು ಎಂದು ಕೋರಿದ್ದಾರೆ.
ತಹಸೀಲ್ದಾರ್ ವರ್ಗ
ಹುಣಸೂರು: ಜ. 24 ರಂದು ಅಧಿಕಾರ ವಹಿಸಿಕೊಂಡಿದ್ದ ತಹಸೀಲ್ದಾರ್ ಶಿವಾನಂದಮೂರ್ತಿ ಅವರನ್ನು ಸರ್ಕಾರ ಕೆ.ಆರ್. ನಗರ ತಾಲೂಕಿಗೆ ದಿಢೀರ್ ವರ್ಗಾವಣೆ ಮಾಡಿದೆ. ಕೊಳ್ಳೇಗಾಲ ತಾಲೂಕು ಕಚೇರಿಯಲ್ಲಿ ಗ್ರೇಡ್ 2 ತಹಸೀಲ್ದಾರ್ ಜಿ.ಬಿ. ಚಂದ್ರಪ್ಪ ಶುಕ್ರವಾರ ತಹಸೀಲ್ದಾರ್ ಆಗಿ ಅಧಿಕಾರ ಸ್ವೀಕರಿಸಿದರು. ಮೊದಲ ದಿನವೆ ಪುರಸಭಾ ಚುನಾವಣೆಯ ಚುನಾವಣಾಧಿಕಾರಿಗಳ ಸಭೆ ನಡೆಸಿದರು. ಹಿಂದಿನ ತಹಸೀಲ್ದಾರ್ ಶಿವಾನಂದಮೂರ್ತಿ ಫೆ. 14 ರಿಂದ ರಜೆ ಹಾಕಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement