ಜೆಡಿಎಸ್ಗೆ ಮತ್ತಿಬ್ಬರು ಮುಖಂಡರ ರಾಜಿನಾಮೆ
ಮೈಸೂರು: ಜಿಲ್ಲಾ ಜೆಡಿಎಸ್ನಲ್ಲಿ ಇತ್ತೀಚೆಗೆ ನಡೆಯುತ್ತಿರುವ ವಿದ್ಯಮಾನಗಳಿಂದ ಬೇಸತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ನೀಡಿರುವುದಾಗಿ ಮೈಮುಲ್ ನಿರ್ದೇಶಕ ಎಸ್. ರಾಮಕೃಷ್ಣೇಗೌಡ, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಚೆಲುವರಾಜೇಗೌಡ ತಿಳಿಸಿದ್ದಾರೆ.ಈಗಾಗಲೇ ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಿ. ಬಸವೇಗೌಡ, ನಿವೃತ್ತ ಡಿಸಿಪಿ ಬಿ.ಪಿ. ಸುರೇಶ್, ಮೈಮುಲ್ ನಿರ್ದೇಶಕ ಕೆ. ಉಮಾಶಂಕರ್, ಜಿಪಂ ಮಾಜಿ ಸದಸ್ಯೆ ಕೆ. ವನಜಾ ರಾಜಿನಾಮೆ ನೀಡಿದ್ದಾರೆ.