ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ತಹಸೀಲ್ದಾರ್ ಗೈರು: ಜನಸ್ಪಂದನ ಮುಂದಕ್ಕೆ

Parashurama
Updated On : 17 Feb 2013, 12:13 pm

ಟಿ. ನರಸೀಪುರ: ತಹಸೀಲ್ದಾರರೆ ಗೈರು ಹಾಜರಾಗಿದ್ದ ಹಿನ್ನೆಲೆ, ಸಾರ್ವಜನಿಕರಿಗೆ ಕಂದಾಯ ಇಲಾಖೆಯ ಅಧಿಕಾರಿಗಳು ಸಮರ್ಪಕ ಉತ್ತರ ನೀಡದ್ದರಿಂದ ದೊಡ್ಡೆಬ್ಬಾಗಿಲು ಗ್ರಾಮದಲ್ಲಿ ಶನಿವಾರ ನಡೆದ ಹೋಬಳಿ ಮಟ್ಟದ ಜನಸ್ಪಂದನ ಸಭೆ ಮುಂದೂಡಲಾಯಿತು.
ಸಭೆಯಲ್ಲಿ ಜನರಿದ್ದರಾದರೂ ಜನರಿಗೆ ಸ್ಪಂದಿಸಬೇಕಾದ ಅಧಿಕಾರಿಗಳೆ ಗೈರು ಹಾಜರಾಗಿದ್ದರಿಂದ ಸಭೆಯನ್ನು ಅರ್ಧಕ್ಕೆ ಮೊಟಕುಗೊಳಿಸಲಾಯಿತು. ಸ್ಥಳೀಯ ಸಂಸ್ಥೆಗಳ ಚುನಾವಣೆ ನಿಮಿತ್ತ ತಹಸೀಲ್ದಾರ್ ಎಚ್.ಕೆ. ಗೀತಾಕೃಷ್ಣ ಅವರು ಸಭೆಗೆ ಬಾರದ್ದರಿಂದ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸಿ. ವೆಂಕಟೇಶ್ ಅವರೆ ಸಾರ್ವಜನಿರ ಅರ್ಜಿ ಮತ್ತು ದೂರನ್ನು ಸ್ವೀಕರಿಸಿ, ಸಭೆ ಮುಂದೂಡಿದರು.
ಜನಸ್ಪಂದನ ಸಭೆಯೂ ಪ್ರಾರಂಭಗೊಳ್ಳುತ್ತಿದ್ದಂತೆ ಕೆಲವರು ದುಃಖ, ದುಮ್ಮಾನಗಳಿಗೆ ಕಂದಾಯ ಇಲಾಖೆಯ ಕೆಲವು ಅಧಿಕಾರಿಗಳು ಉತ್ತರ ನೀಡಿದರಾದರೂ, ಸಮರ್ಪಕ ಮಾಹಿತಿ ನೀಡಲು ಸಾಧ್ಯವಾಗಲಿಲ್ಲ.
ತಾಪಂ ಅಧ್ಯಕ್ಷ ತುಂಬಲ ಅಂದಾನಿ, ಮಾಜಿ ಅಧ್ಯಕ್ಷ ಎಂ. ಮಲ್ಲಿಕಾರ್ಜುನ ಸ್ವಾಮಿ, ಮಾಜಿ ಉಪಾಧ್ಯಕ್ಷ ಪಿ. ಗಿರೀಶ್, ಸೋಸಲೆ ನಾಡ ಕಚೇರಿಯ ಉಪ ತಹಸೀಲ್ದಾರ್ ಪ್ರದೀಪ್, ರಾಜಸ್ವ ನಿರೀಕ್ಷಕ ಮಲ್ಲೇಶ್, ಗ್ರಾಪಂ ಸದಸ್ಯ ಶಿವಸ್ವಾಮಿ, ಸರ್ದಾರ್ ಪಾಷ, ಶಿವು, ಎಸ್. ಮಂಜುನಾಥ, ಮಹದೇವಪ್ಪ, ಎಸ್. ಮಹದೇವಶೆಟ್ಟಿ, ಸೋಮಾಚಾರ್, ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement