ಪರಿಶ್ರಮದಿಂದ ಉತ್ತಮ ಭವಿಷ್ಯ ರೂಪಿಸಿಕೊಳ್ಳಿ
ಟಿ. ನರಸೀಪುರ: ಕಲಿಕೆಯ ಹಂತದಲ್ಲಿಯೆ ಕಠಿಣ ಪರಿಶ್ರಮದ ಮೂಲಕ ಹೆಣ್ಣು ಮಕ್ಕಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ವಿದ್ಯೋದಯ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಪ್ರೊ. ಎಸ್. ಗೋಪಾಲ್ ಹೇಳಿದರು. ಇಲ್ಲಿನ ಹಳೆ ಸಂತೆಮಾಳದಲ್ಲಿರುವ ಹಿಂದುಳಿದ ವರ್ಗಗಳ ಮಹಿಳಾ ವಿದ್ಯಾರ್ಥಿನಿಲಯದಲ್ಲಿ ಶನಿವಾರ ನಡೆದ ನಿಲಯದ ಪ್ರಥಮ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿ, ಸಾಮಾಜಿಕ ವ್ಯವಸ್ಥೆಯಲ್ಲಿ ಪ್ರತಿಷ್ಠಿತ ವ್ಯಕ್ತಿಗಳಾಗಿ ರೂಪುಗೊಳ್ಳಲು ವಿದ್ಯಾರ್ಥಿಯ ದೆಸೆಯಲ್ಲಿಯೆ ಆಲೋಚನೆಯ ಶಕ್ತಿ ಬದಲಾಗಬೇಕು ಎಂದರು.
ಬಿಸಿಎಂ ವಿಸ್ತರಣಾಧಿಕಾರಿ ವಿಶ್ವೇಶ್ವರಮೂರ್ತಿ, ಪಿಆರ್ಎಂ ಡಿ.ಇಡಿ ಕಾಲೇಜಿನ ಪ್ರಾಂಶುಪಾಲ ಸುಧೀಂದ್ರ, ರೇಖಾ ಸುರೇಶ್, ಮಹೇಶ್, ಶಿವಕುಮಾರ್, ಚಿಕ್ಕಮ್ಮಣ್ಣಿ, ಶೋಭಾ, ದಿವ್ಯ ಇದ್ದರು.