ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಅರಮನೆ ಆವರಣದಲ್ಲಿ ಉತ್ಸವಮೂರ್ತಿ ಮೆರವಣಿಗೆ

Parashurama
Updated On : 17 Feb 2013, 11:40 am

ಮೈಸೂರು: ರಥಸಪ್ತಮಿ ಅಂಗವಾಗಿ ಭಾನುವಾರ ಅರಮನೆ ಆವರದಲ್ಲಿರುವ ಒಂಬತ್ತು ದೇವಸ್ಥಾನಗಳ ಉತ್ಸವಮೂರ್ತಿಗಳ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು.
ಬೆಳಗ್ಗೆ 6.30 ರಿಂದಲೇ ಪೂಜಾ ವಿಧಿವಿಧಾನಗಳು ಆರಂಭವಾದವು. ಮಂತ್ರಗಳನ್ನು ಸ್ತುತಿಸಿ ಸೂರ್ಯದೇವನನ್ನು ಸ್ಮರಿಸಲಾಯಿತು. ನಂತರ ಶ್ವೇತಾವರಾಹ, ಲಕ್ಷ್ಮೀನಾರಾಯಣ, ಖಿಲ್ಲೆ ವೆಂಕಟರಣ, ತ್ರಿನೇಶ್ವರ, ಭುವನೇಶ್ವರಿ, ಗಾಯತ್ರಿ, ತೇರಂದೇವಿ ಅಮ್ಮನವರು, ಪ್ರಸನ್ನಕೃಷ್ಣ ಹಾಗೂ ಅರಮನೆ ಅಮ್ಮನವರ ಉತ್ಸವಗಳನ್ನು ಸೂರ್ಯ ಮಂಡಲ ವಾಹನದಲ್ಲಿ ಅಲಂಕರಿಸಿ ಆವರಣದಲ್ಲಿ ಮೆರವಣಿಗೆ ಮಾಡಿ ನಂತರ ಅರಮನೆ ಮುಂಭಾಗಕ್ಕೆ ತರಲಾಯಿತು.
ರಥಸಪ್ತಮಿ ಅಂಗವಾಗಿ ಅರಮನೆ ಜಯಮಾರ್ತಾಂಡ, ಬಲರಾಮ, ವರಾಹ, ಕರಿಕಲ್ಲು ತೊಟ್ಟಿ ದ್ವಾರಗಳನ್ನು ಪ್ರವೇಶಕ್ಕೆ ಮುಕ್ತಗೊಳಿಸಲಾಗಿತ್ತು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಉತ್ಸವಮೂರ್ತಿಗಳ ದರ್ಶನ ಪಡೆದು ಪುಳಕಿತರಾದರು. ಮಧ್ಯಾಹ್ನ 12 ಗಂಟೆಯವರೆಗೂ ಭಕ್ತಾದಿಗಳ ಸಂಖ್ಯೆ ಕಡಿಮೆಯಾಗಲಿಲ್ಲ.
ಅರ್ಚಕರಾದ ಲಕ್ಷ್ಮೀನಾರಾಯಣ ಭಟ್ಟ, ಸುದರ್ಶನ ಭಟ್ಟ, ರಾಧಾಕೃಷ್ಣ ದೀಕ್ಷಿತ್, ಕೇಶವಮೂರ್ತಿ, ಶ್ರೀಹರಿ, ರಾಘವನ್, ಸಂತನಾ ಅವರ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ನಡೆದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement