ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

'ಕಿರುಕದನ': ರಾಜಕೀಯ ಚಟುವಟಿಕೆ ಬಿರುಸು

Parashurama
Updated On : 17 Feb 2013, 11:35 am

ಎಚ್.ಡಿ. ಕೋಟೆ: ಪಟ್ಟಣ ಪಂಚಾಯಿತಿಗೆ ಮಾ. 7 ರಂದು ಚುನಾವಣೆಯ ದಿನಾಂಕ ನಿಗದಿಯಾದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ವಿವಿಧ ಪಕ್ಷಗಳಲ್ಲಿ ಬಿರುಸಿನ ಚಟುವಟಿಕೆಗಳು ಗರಿಗೆದರಿವೆ.
ಪಟ್ಟಣದ ಹುಣಸೂರು ಬೇಗೂರು ರಸ್ತೆಯ ಕಾಂಗ್ರೆಸ್ ಕಚೇರಿಯಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಪೂರ್ವಭಾವಿ ಸಭೆ ಕರೆದು, ಪಟ್ಟಣದ 13 ವಾರ್ಡ್‌ಗಳಿಗೆ ಸ್ಪರ್ಧಿಸುವ ಆಕಾಂಕ್ಷೆ ಹೊಂದಿರುವ ಅಭ್ಯರ್ಥಿಗಳು ಹಾಗೂ ಕಾರ್ಯಕರ್ತರಿಂದ ಅಭಿಪ್ರಾಯ ಸಂಗ್ರಹಿಸಲಾಯಿತು.
ಸಭೆಯಲ್ಲಿ ಆಕಾಂಕ್ಷಿಗಳು ಮಾತನಾಡುತ್ತಾ, ಮುಂದೆ ಬರಲಿರುವ ವಿಧಾನಸಭೆಯ ಚುನಾವಣೆ ಗಮನದಲ್ಲಿಟ್ಟುಕೊಂಡು ಪಪಂನಲ್ಲಿ ಕಾಂಗ್ರಸ್ ಅಧಿಕಾರಕ್ಕೆ ಬರಬೇಕು. ಉತ್ತಮ ಆಭ್ಯರ್ಥಿಗಳಿಗೆ ಪಕ್ಷದಿಂದ ಟಿಕೆಟ್ ನೀಡಬೇಕೆಂದು ಕೋರಿದ ಅವರು, ನಮ್ಮ ಪಕ್ಷದಿಂದ ಗೆದ್ದ ನಂತರ ಇತರೆ ಪಕ್ಷಗಳಿಗೆ ಹಾರುವ ಉದ್ಧಟತನಕ್ಕೂ ಬ್ರೇಕ್ ಹಾಕುವಂತೆ ಒತ್ತಾಯಿಸಿದರು.
ನಂತರ ಕೆಪಿಸಿಸಿ ಸದಸ್ಯ ಸುಂದರದಾಸ್ ಮಾತನಾಡಿ, ಸ್ಥಳೀಯ ಚುನಾವಣೆಯು ಮುಂಬರುವ ವಿಧಾನಸಭೆ ಚುನಾವಣೆಗೆ ದಾರಿಯಾಗುವುದರಿಂದ ಉತ್ತಮ ವ್ಯಕ್ತಿಗಳಿಗೆ ಪಕ್ಷದ ಟಿಕೆಟ್ ನೀಡಲಾಗುವುದು ಎಂದರು.
ಎಚ್.ಡಿ. ಕೋಟೆ ಬ್ಲಾಕ್ ಅಧ್ಯಕ್ಷ ತಮ್ಮಣ್ಣೇಗೌಡ, ಸರಗೂರು ಬ್ಲಾಕ್‌ನ ಬಾಲಯ್ಯ, ಜಿಪಂ ಸದಸ್ಯ ನಂದಿನಿ ಚಂದ್ರಶೇಖರ್, ಕೃಷ್ಣೇಗೌಡ, ಸಿದ್ದರಾಮೇಗೌಡ, ಏಜಾಜ್ ಪಾಷ, ಮಹದೇವಪ್ಪ, ಎಚ್.ಎಸ್. ನಂದಕುಮಾರ್, ತಾಜ್, ಎಸ್.ಎನ್. ರಂಗೇಗೌಡ, ಪ್ರಕಾಶ್, ಎಚ್.ಸಿ. ರವೀಂದ್ರ, ಎಚ್.ಆರ್. ಶ್ರೀನಿವಾಸ್, ರಾಜೇಂದ್ರ, ಗಿರಿಗೌಡ, ಪರಶಿವಮೂರ್ತಿ, ಕನ್ನಡ ಪ್ರಮೋದ್, ಸುರೇಂದ್ರ ಮೊದಲಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement