ಕ್ರೀಡೆಗೆ ಜಾತಿ ಭೇದವಿಲ್ಲ
ಪಿರಿಯಾಪಟ್ಟಣ: ಕ್ರೀಡೆಗೆ ಯಾವುದೇ ಜಾತಿ ಭೇದವಿಲ್ಲ ಎಂದು ಜಿಲ್ಲಾ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್ ಹೇಳಿದರು.
ಪಟ್ಟಣದ ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜು ಆವರಣದಲ್ಲಿ ಯಂಗ್ ಸ್ಟಾರ್ ಕ್ರಿಕೆಟ್ ಕ್ಲಬ್ ವತಿಯಿಂದ ಏರ್ಪಡಿಸಿದ್ದ 14ನೇ ವರ್ಷದ ರಾಜ್ಯ ಮಟ್ಟದ ಹಂಟರ್ಸ್ ಕಪ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದ ಅವರು, ಕ್ರೀಡೆ ಹಾಗೂ ಪ್ರತಿಭೆಗೆ ಯಾವ ದೇಶದಲ್ಲೂ ಜಾತಿ ಧರ್ಮ ಭಾಷೆಯ ತಾರತಮ್ಯವಿಲ್ಲ ಹಾಗೂ ಬಡವ ಶ್ರೀಮಂತನೆಂಬ ಭೇದಭಾವವಿಲ್ಲ. ಆದರೆ, ರಾಜಕೀಯ ಜಾತಿ ಆಧಾರಿತವಾದ್ದು. ಕ್ರೀಡೆಗೆ ಯಾವತ್ತೂ ರಾಜಕೀಯ ಬೆರೆಸಬಾರದು ಎಂದು ತಿಳಿಸಿದರು.
ಪಪಂ ಮಾಜಿ ಅಧ್ಯಕ್ಷೆ ಮಂಜುಳಾ ನಾಗೇಶ್ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಶಿವರಾಂ, ಸೋಮಣ್ಣ, ಕ್ಲಬ್ನ ಗಣೇಶ್, ಉಮೇಶ್, ಸಲ್ಮಾನ್, ಗೋಪಿ, ರವಿ, ನಾದೀರ್, ಮಂಜು, ದಯಾನಂದ್ ಇದ್ದರು.