ಮೂವರಿಗೆ ಪಿಎಚ್.ಡಿ
ಮೈಸೂರು: ಡಾ. ಶಿವಣ್ಣ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ ಡಿ. ನಟಶೇಖರ್ ಸಾದರಪಡಿಸಿದ ಮಹಾಪ್ರಬಂಧವನ್ನು ಮಂಗಳೂರು ವಿವಿ ಅಂಗೀಕರಿಸಿ ಭೂ ವಿಜ್ಞಾನಶಾಸ್ತ್ರದಲ್ಲಿ ಪಿಎಚ್.ಡಿ ನೀಡಿದೆ. ಡಾ.ಸಿ. ಕೃಷ್ಣಯ್ಯ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ ಎಂ.ಕೆ. ಗಿರಿಶ್ಚಂದ್ರ ಸಾದರಪಡಿಸಿದ ಮಹಾಪ್ರಬಂಧವನ್ನು ಮಂಗಳೂರು ವಿವಿ ಅಂಗೀಕರಿಸಿ ಅವರಿಗೆ ಭೂ ವಿಜ್ಞಾನ ಶಾಸ್ತ್ರದಲ್ಲಿ ಪಿಎಚ್.ಡಿ ಪದವಿ ನೀಡಿದೆ. ಡಾ.ಟಿ.ವಿ. ಸತ್ಯನಾರಾಯಣರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ ಆರ್. ರಾಘವೇಂದ್ರರಾವ್ ಸಾದರಪಡಿಸಿದ ಮಹಾಪ್ರಬಂಧ ಮೈಸೂರು ವಿವಿ ಅಂಗೀಕರಿಸಿ, ಸಂಸ್ಕೃತ ವಿಷಯದಲ್ಲಿ ಪಿಎಚ್.ಡಿ ಪದವಿ ನೀಡಿದೆ.
ಪಾಲಿಕೆ ಚುನಾವಣೆ: ಅರ್ಜಿ ಆಹ್ವಾನ
ಮೈಸೂರು: ನಗರ ಪಾಲಿಕೆ ಚುನಾವಣೆಗೆ ಬಿಜೆಪಿಯಿಂದ ಸ್ಪರ್ಧಿಸಲು ಇಚ್ಛಿಸುವ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಫೆ. 18ರ ಬೆಳಗ್ಗೆ 10ರಿಂದ ಸಂಜೆ 7 ರವರೆಗೆ ಕಚೇರಿಯಲ್ಲಿ ಅರ್ಜಿ ಪಡೆದು ಭರ್ತಿ ಮಾಡಿ ಫೆ. 19ರೊಳಗೆ ಸಲ್ಲಿಸುವಂತೆ ನಗರಾಧ್ಯಕ್ಷ ಎಂ. ಶಿವಕುಮಾರ್ ತಿಳಿಸಿದ್ದಾರೆ.
ಎನ್ಐಇಗೆ ಜಯ
ಮೈಸೂರು: ಗುರುಪ್ರಸಾದ್ ಸ್ವಾಮಿ ಬಾರಿಸಿದ ಅರ್ಧ ಶತಕದ ನೆರವಿನೊಂದಿಗೆ ಎನ್ಐಇ ಕಾಲೇಜು ತಂಡವು, ಸೆಂಟ್ ಫಿಲೋಮಿನಾ ಕಾಲೇಜು ತಂಡವನ್ನು ಸೋಲಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ಇಲ್ಲಿನ ಎಸ್ಜೆಸಿಇ ಮೈದಾನದಲ್ಲಿ ಕೆಎಸ್ಸಿಎ ಮೈಸೂರು ವಲಯ ಏರ್ಪಡಿಸಿರುವ ಅಂತರ ಕಾಲೇಜು ನಾಕ್ಔಟ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಎನ್ಐಇ ಕಾಲೇಜು ತಂಡ 6 ವಿಕೆಟ್ಗಳ ಗೆಲವು ದಾಖಲಿಸಿದೆ.