ಸರಳ ಅಂತರ್ಜಾತಿ ವಿವಾಹ
ಮೈಸೂರು: ಸಮಾಜದ ಪಿಡುಗುಗಳಾದ ಕಾಲ, ಗೋತ್ರ, ವರದಕ್ಷಿಣೆ, ಜಾತಿಗಳನ್ನು ಮೀರಿ ಪರಸ್ಪರ ಪ್ರೀತಿ ಮತ್ತು ಗೌರವಕ್ಕೆ ಮಣಿದು ಯುವ ಪ್ರೇಮಿಗಳು ಭಾನುವಾರ ಸರಳ ಅಂತರ್ಜಾತಿ ವಿವಾಹದಲ್ಲಿ ಒಂದಾದರು. ಜನಪರ ವಿವಾಹ ವೇದಿಕೆಯು ನಗರದ ರೋಟರಿ ಕೇಂದ್ರದಲ್ಲಿ ಏರ್ಪಡಿಸಿದ್ದ ಸರಳ ವಿವಾಹದಲ್ಲಿ ಬಿಬಿಎಂ ಪದವೀಧರೆ ಪಿ. ಮುಕ್ತಾ ಹಾಗೂ ಎಂಸಿಎ ಸ್ನಾತಕೋತ್ತರ ಪದವೀಧರ ಎನ್.ಬಿ. ವಾಸುದೇವ ಎಂಬವರೇ ಪರಸ್ಪರ ಸತಿಪತಿಗಳಾದರು. ವೇದಿಕೆಯ ಲಕ್ಷ್ಮಣ್, ಎಸ್. ನರೇಂದ್ರಕುಮಾರ್, ನಾಗಮಂಗಲ ಕೃಷ್ಣಮೂರ್ತಿ, ಬಿ.ಆರ್. ರಂಗಸ್ವಾಮಿ, ಬೀರಹಳ್ಳಿ ರಾಮೇಗೌಡ ಸಮ್ಮುಖ ವಹಿಸಿದ್ದರು.