ಸುಬ್ಬರಾಯನಕೆರೆಯಲ್ಲೂ ಸೂರ್ಯ ನಮಸ್ಕಾರ
ಮೈಸೂರು: ಮೈಸೂರು ಯೋಗ ಅಸೋಸಿಯೇಷನ್ ರಥಸಪ್ತಮಿ ಪ್ರಯುಕ್ತ ಇಲ್ಲಿನ ನಾರಾಯಣಶಾಸ್ತ್ರ ರಸ್ತೆಯಲ್ಲಿನ ಸುಬ್ಬರಾಯನಕೆರೆ ಬ್ಯಾಸ್ಕೆಟ್ಬಾಲ್ ಮೈದಾನದಲ್ಲಿ 108 ಸಾಮೂಹಿಕ ಸೂರ್ಯ ನಮಸ್ಕಾರ ಏರ್ಪಡಿಸಲಾಗಿತ್ತು.
ಯೋಗ ಗುರು ನೀಲ್ಕುಮಾರ್ ಗಾಯತ್ರಿ ಮಂತ್ರ ಜಪಿಸಿದರೆ, ಅಸೋಸಿಯೇಷನ್ ಅಧ್ಯಕ್ಷ ಬಿ. ಧನ್ಯಕುಮಾರ್ ಯೋಗಾಸನದ ಕೌಂಟಿಂಗ್ ಹೇಳಿದರು. ಪ್ರಾತಃಕಾಲ 6.15ಕ್ಕೆ ಸೂರ್ಯ ನಮಸ್ಕಾರ ಆರಂಭಿಸಿ, ಸೂರ್ಯಯಜ್ಞವನ್ನು ಯಶಸ್ವಿಯಾಗಿ ಪೂರೈಸಲಾಯಿತು. ನಗರದ ವಿವಿಧ ಭಾಗಗಳಿಂದ ಸುಮಾರು 350ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.
ಮೈಸೂರು ಯೋಗ ಅಸೋಸಿಯೇಷನ್ ಪದಾಧಿಕಾರಿಗಳಾದ ಯೋಗಪ್ರಕಾಶ್, ವಿ. ಸೋಮಶೇಖರ್, ಪುಷ್ಕರಣಿ ಶಾಲೆಯ ವೆಂಕಟೇಶ್, ಪಾಲಿಕೆ ಸದಸ್ಯ ಶಿವಕುಮಾರ್ ಮೊದಲಾದವರು ಇದ್ದರು.