ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಆರೋಗ್ಯಕ್ಕೆ ಸಂಗೀತ ವರದಾನ: ಶಂಕರರಾವ್

Parashurama
Updated On : 24 Feb 2013, 10:01 am

ಮೈಸೂರು: ಆರೋಗ್ಯ ವರ್ಧನೆಗೆ ಸಂಗೀತ ವರದಾನ ಎಂದು ಹಿರಿಯ ಸಂಗೀತ ವಿದ್ವಾಂಸ ಹಾಗೂ ವೇಣುಗಾನ ವಿಶಾರದ ಬಿ. ಶಂಕರರಾವ್ ಅಭಿಪ್ರಾಯಪಟ್ಟರು.
ಮುಲಕನಾಡು ಸಭಾ ಚಾರಿಟಲ್ ಟ್ರಸ್ಟ್ ಸಂತಶ್ರೀ ತ್ಯಾಗರಾಜ ಆರಾಧನಾ ಮಹೋತ್ಸವದ ಅಂಗವಾಗಿ ಭಾನುವಾರ ಏರ್ಪಡಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಸಂಗೀತವನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳುವುದು ಉತ್ತಮ ಹವ್ಯಾಸ. 92ರ ಈ ವಯೋವಾನದಲ್ಲಿಯೂ ನಾನು ಇಷ್ಟೊಂದು ಉತ್ಸಾಹದಿಂದ ಇರಲು ಕಾರಣ ಸಂಗೀತ ಅಭ್ಯಾಸ. ಬೆಂಗಳೂರಿನಲ್ಲಿ ಪ್ರಪಂಚ ಎಂಬ ಸಂಗೀತ ಶಾಲೆ ತೆರೆದಿದ್ದೇನೆ. ಮಕ್ಕಳಾದಿಯಾಗಿ ವಯೋವೃದ್ಧರು ಸಹ ಸಂಗೀತ ಕಲಿಸಯುತ್ತಿದ್ದಾರೆ ಎಂದು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಪ್ರೊ.ಕೆ.ಜಿ. ಸತ್ಯನಾರಾಯಣ ಮಾತನಾಡಿ, ಸಂಗೀತ ನೋವು ನಿವಾರಿಸಿ ಮನಸ್ಸಿಗೆ ಸಂತಸ ನೀಡುವ ಸಾಧನ. ಇದಕ್ಕೆ ಯಾವುದೇ ಭಾಷೆ, ಜಾತಿ, ಧರ್ಮ ಹಾಗೂ ಮೇಲು ಕೀಳೆಂಬ ಭೇದಭಾವವಿಲ್ಲ. ಸಮಾಜವನ್ನು ಒಂದುಗೂಡಿಸುವಲ್ಲಿ ಇದು ಸಹಕಾರಿ ಎಂದರು. ಸಂಘದ ಗೌರವಾಧ್ಯಕ್ಷ ಹಾಗೂ ಹಿರಿಯ ವಿದ್ವಾಂಸ ಡಾ.ಟಿ.ವಿ. ವೆಂಕಟಾಚಲಶಾಸ್ತ್ರಿ ಅವರು ಬಿ. ಶಂಕರರಾವ್ ಅವರನ್ನು ಸನ್ಮಾಸಿದರಲ್ಲದೆ, ವಾಗೀಶ್ವರಿಶಾಸ್ತ್ರಿ ಸಂಗೀತ ಪ್ರತಿಭಾ ಪುರಸ್ಕಾರವನ್ನು ಚೈತ್ರಿಕಾ ಅವರಿಗೆ ನೀಡಿ ಗೌರವಿಸಿದರು. ಸಂಘದ ವ್ಯವಸ್ಥಾಪಕ ಸುರೇಶ್‌ಬಾಬು, ಕಾರ್ಯದರ್ಶಿ ಬಿ.ಕೆ. ಶ್ರೀನಿವಾಸಮೂರ್ತಿ ಇದ್ದರು. ವಿದ್ವಾನ್ ಆರ್.ಕೆ. ಪದ್ಮನಾಭ ಹಾಗೂ ವಿದುಷಿ ಸತ್ಯವತಿ ನೀಲಕಂಠ ಅವರು ಪಂಚರತ್ನ ಕೀರ್ತಿನೆಗಳ ಗಾಯನ ನಡೆಸಿಕೊಟ್ಟರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement