ಇಂದು ಜಿಟಿಡಿ ಜೆಡಿಎಸ್ಗೆ
ಮೈಸೂರು: ರಾಜ್ಯ ಸಹಕಾರ ಮಹಾಮಂಡಳ ಅಧ್ಯಕ್ಷರಾದ ಮಾಜಿ ಸಚಿವ ಜಿ.ಟಿ. ದೇವೇಗೌಡ ಅವರು ಫೆ.25 ರಂದು ಜೆಡಿಎಸ್ಗೆ ಸೇರ್ಪಡೆಯಾಗಲಿದ್ದಾರೆ. ಅಂದು ಮಧ್ಯಾಹ್ನ 12ಕ್ಕೆ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯಲಿರುವ ಜಿ.ಟಿ. ದೇವೇಗೌಡ ಮರಳಿ ಮನೆಗೆ ಕಾರ್ಯಕ್ರಮವನ್ನು ಮಾಜಿ ಮುಖ್ಯಮಂತ್ರಿ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರಸ್ವಾಮಿ ಉದ್ಘಾಟಿಸುವರು. ಜಾತ್ಯತೀತ ಪರ್ವಕಾಲ ಸಮಾವೇಶ ನಡೆಯಲಿದ್ದು ಅನೇಕ ಮುಖಂಡರು ಭಾಗವಹಿಸುವರು. ಜಿ.ಟಿ, ದೇವೇಗೌಡರೊಂದಿಗೆ ಜಿಪಂ ಮಾಜಿ ಅಧ್ಯಕ್ಷ ಕಡಕೊಳ ನಾಗರಾಜ್, ಎಂ.ಪಿ. ನಾಗರಾಜ್, ಎಪಿಎಂಸಿ ಮಾಜಿ ಸದಸ್ಯ ದೂರ ಮಂಜುನಾಥ್, ಹುಣಸೂರು ತಾಲೂಕಿನ ಹಲವಾರು ಮುಖಂಡರು ಸೇರ್ಪಡೆಯಾಗಲಿದ್ದಾರೆ.