ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಇಂದು ಜಿಟಿಡಿ ಜೆಡಿಎಸ್‌ಗೆ

Parashurama
Updated On : 24 Feb 2013, 11:04 am

ಮೈಸೂರು: ರಾಜ್ಯ ಸಹಕಾರ ಮಹಾಮಂಡಳ ಅಧ್ಯಕ್ಷರಾದ ಮಾಜಿ ಸಚಿವ ಜಿ.ಟಿ. ದೇವೇಗೌಡ ಅವರು ಫೆ.25 ರಂದು ಜೆಡಿಎಸ್‌ಗೆ ಸೇರ್ಪಡೆಯಾಗಲಿದ್ದಾರೆ. ಅಂದು ಮಧ್ಯಾಹ್ನ 12ಕ್ಕೆ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯಲಿರುವ ಜಿ.ಟಿ. ದೇವೇಗೌಡ ಮರಳಿ ಮನೆಗೆ ಕಾರ್ಯಕ್ರಮವನ್ನು ಮಾಜಿ ಮುಖ್ಯಮಂತ್ರಿ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರಸ್ವಾಮಿ ಉದ್ಘಾಟಿಸುವರು. ಈ ಸಂದರ್ಭದಲ್ಲಿ ಜಾತ್ಯತೀತ ಪರ್ವಕಾಲ ಸಮಾವೇಶ ನಡೆಯಲಿದ್ದು ಅನೇಕ ಮುಖಂಡರು ಭಾಗವಹಿಸುವರು. ಜಿ.ಟಿ, ದೇವೇಗೌಡರೊಂದಿಗೆ ಜಿಪಂ ಮಾಜಿ ಅಧ್ಯಕ್ಷ ಕಡಕೊಳ ನಾಗರಾಜ್, ನಾಗರಾಜ್, ಎಪಿಎಂಸಿ ಮಾಜಿ ಸದಸ್ಯ ದೂರ ಮಂಜುನಾಥ್ ಸೇರಿದಂತೆ ಹಲವಾರು ಸೇರ್ಪಡೆಯಾಗಲಿದ್ದಾರೆ.
ಜಿಲ್ಲೆಯಲ್ಲಿ ಪಲ್ಸ್ ಪೋಲಿಯೋ ಯಶಸ್ವಿ
ಮೈಸೂರು: ಮೈಸೂರು ಜಿಲ್ಲೆಯಲ್ಲಿ ಭಾನುವಾರ ನಡೆದ 2ನೇ ಸುತ್ತಿನ ಪಲ್ಸ್ ಪೋಲಿಯೋ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು. ಟಿ. ನರಸೀಪುರ ತಾಲೂಕಿನಲ್ಲಿ ಶೇ.95, ನಂಜನಗೂಡು ಶೇ.98.4, ಎಚ್.ಡಿ. ಕೋಟೆ ಶೇ.94.4, ಹುಣಸೂರು ಶೇ.97.7, ಪಿರಿಯಾಪಟ್ಟಣ 96.4, ಕೆ.ಆರ್. ನಗರ 93.7 ಹಾಗೂ ಮೈಸೂರು ಗ್ರಾಮಾಂತರದಲ್ಲಿ ಶೇ.95.7 ಸೇರಿ ಜಿಲ್ಲೆಯಲ್ಲಿ ಶೇ.95 ಪ್ರಗತಿ ಸಾಧಿಸಲಾಗಿದೆ ಎಂದು ಡಿಎಚ್‌ಒ ಡಾ.ಎಸ್.ಎಂ. ಮಾಲೇಗೌಡ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement