ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಎರಡು ಕುಟುಂಬ ಪಿಂಚಣಿ ಅರ್ಹತೆ

Parashurama
Updated On : 24 Feb 2013, 11:17 am

ಮೈಸೂರು: ಮಾಜಿ ಸೈನಿಕರು ಕೇಂದ್ರ, ರಾಜ್ಯ ಮತ್ತು ಅರೆ ಸರ್ಕಾರಿ ಸಂಸ್ಥೆಗಳಲ್ಲಿ ಮರು ಸೇವೆ ಸಲ್ಲಿಸಿ ಎರಡು ಪಿಂಚಣಿ ಪಡೆಯುತ್ತಿದ್ದು, ಅವರು ಮೃತಪಟ್ಟಾಗ ಅವರ ಪತ್ನಿಗೆ ಎರಡೂ ಕುಟುಂಬ ಪಿಂಚಣಿಗಳನ್ನು 2012ರ ಸೆ. 24 ರಿಂದ ಪಡೆದುಕೊಳ್ಳಲು ಕೇಂದ್ರ ಸರ್ಕಾರವು ಆದೇಶ ಹೊರಡಿಸಿದೆ.
ಆದ್ದರಿಂದ ಅರ್ಹ ಮಾಜಿ ಸೈನಿಕರ ಪತ್ನಿಯರು ಎರಡೂ ಕುಟುಂಬ ಪಿಂಚಣಿಗಳನ್ನು ಪಡೆದುಕೊಳ್ಳುವ ಕುರಿತು ಕೆಲವು ದಾಖಲೆಗಳನ್ನು ಖುದ್ದಾಗಿ ಉಪ ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಇವರ ಕಾರ್ಯಾಲಯಕ್ಕೆ ಕೂಡಲೆ ಭೇಟಿ ನೀಡಿ ತಪ್ಪದೆ ಸಲ್ಲಿಸಲು ಸೈನಿಕ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಇವರನ್ನು ದೂ. 2425240 ಸಂಪರ್ಕಿಸಬಹುದು.
ಪದವೀಧರರಿಗೆ ತರಬೇತಿ ಭತ್ಯೆ: ಅರ್ಜಿ
ಮೈಸೂರು: ಜಿಲ್ಲೆಯ ಹಿಂದುಳಿದ ವರ್ಗಗಳ ಕಾನೂನು ಪದವೀಧರರಿಗೆ 2012-13ನೇ ಸಾಲಿನಲ್ಲಿ ನಾಲ್ಕು ವರ್ಷದ ಅವಧಿಯ ನ್ಯಾಯಾಂಗ ಆಡಳಿತದಲ್ಲಿ ತರಬೇತಿ ನೀಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ತರಬೇತಿಯನ್ನು ಮೈಸೂರು ಜಿಲ್ಲೆಯಲ್ಲಿಯೆ ನೀಡಲಾಗುವುದು. ಜಿಲ್ಲೆಯಿಂದ ಹತ್ತು ಅಭ್ಯರ್ಥಿಗಳನ್ನು ಮಾತ್ರ ತರಬೇತಿಗೆ ಆಯ್ಕೆ ಮಾಡಲಾಗುವುದು. ಅರ್ಜಿಗಳನ್ನು ಸಲ್ಲಿಸಬಯಸುವ ಅಭ್ಯರ್ಥಿಗಳು ಹಿಂದುಳಿದ ವರ್ಗಗಳ ವರ್ಗ-1, 2ಎ, 3ಎ, ಮತ್ತು 3ಬಿ ಗೆ ಸೇರಿರಬೇಕು, ಜಿಲ್ಲೆಯಲ್ಲಿ ವಾಸ ಮಾಡುತ್ತಿರುವ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಆಸಕ್ತಿಯುಳ್ಳ ಹಿಂದುಳಿದ ವರ್ಗದ ಅಭ್ಯರ್ಥಿಗಳು ಅರ್ಜಿಯನ್ನು ಜಿಲ್ಲಾ ಅಧಿಕಾರಿಗಳು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ನಂ.9ಎ, 3ನೇ ಮಹಡಿ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಸಾಹುಕಾರ್ ಚೆನ್ನಯ್ಯ ರಸ್ತೆ, ಸರಸ್ವತಿಪುರಂ, ಮೈಸೂರು ಅವರಿಂದ ಪಡೆದು ಫೆ.26 ರ ಸಂಜೆ 5.30 ರೊಳಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಸದರಿ ಕಚೇರಿಯ ದೂ. 2342917.
ಕಲಾವಿದರಿಂದ ಅರ್ಜಿ ಆಹ್ವಾನ
ಮೈಸೂರು: ರಾಷ್ಟ್ರಕವಿ ಕುವೆಂಪು ಅವರ ಮಲೆಗಳಲ್ಲಿ ಮದುಮಗಳು ಮಹಾ ಕಾದಂಬರಿಯ ರಂಗಪ್ರಯೋಗಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮುಂದಾಗಿದ್ದು, ಕಲಾವಿದರ ಆಯ್ಕೆಗೆ ಅರ್ಜಿ ಆಹ್ವಾನಿಸಿದೆ. ಮೈಸೂರಿನ ರಂಗಾಯಣ ನಡೆಸಿದ ಯಶಸ್ವಿ ಪ್ರಯೋಗದ ಬಳಿಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈ ಪ್ರಯೋಗ ಕೈಗೆತ್ತಿಕೊಂಡಿದೆ. ಮಾರ್ಚ್ 3ನೇ ವಾರದಿಂದ ಬೆಂಗಳೂರಿನ ಕಲಾ ಗ್ರಾಮದಲ್ಲಿ ಈ ರಂಗ ಪ್ರಯೋಗದ 32 ಪ್ರದರ್ಶನ ಏರ್ಪಡಿಸಿದೆ. ಇದರ ಪೂರ್ವ ಅಭ್ಯಾಸವನ್ನು ಫೆ.27 ರಿಂದ ಆರಂಭಿಸಲು 80 ಕಲಾವಿದರು ಬೇಕಿದ್ದಾರೆ.ಫೆ.25ರ ಬೆಳಗ್ಗೆ 10.30 ರೊಳಗೆ ಬೆಂಗಳೂರಿನ ಜೆ.ಸಿ. ರಸ್ತೆಯ ಕನ್ನಡ ಭವನದಲ್ಲಿ ಅಕಾಡೆಮಿಯ ರಂಗ ತಾಲೀಮು ಕೊಠಡಿಯಲ್ಲಿ ಸಂದರ್ಶನಕ್ಕೆ ಹಾಜರಾಗಬೇಕು. ಆಸಕ್ತರು ಕಾ.ತ. ಚಿಕ್ಕಣ್ಣ ಅವರ ಮೊ. 94480- 91191, ಸಿ. ಬಸವಲಿಂಗಯ್ಯ ಅವರ ಮೊ. 94485- 38620 ಸಂಪರ್ಕಿಸಬಹುದು.
ನಾಳೆ ವೀರಗಾಸೆ ಜಾನಪದೋತ್ಸವ
ಮೈಸೂರು: ಇಲ್ಲಿನ ಗೌರಿಶಂಕರನಗರದ ಅಭಿನವ ಶ್ರೀ ವೀರಭದ್ರೇಶ್ವರ ನೃತ್ಯ ತಂಡದ ಮೂರನೇ ವರ್ಷದ ವೀರಗಾಸೆ ಜಾನಪದೋತ್ಸವವು ಫೆ. 26 ರಂದು ಗಣಪತಿ ಸಚ್ಚಿದಾನಂದ ಆಶ್ರಮದ ಪೌಂಡರೀಕ ರಂಗಮಂಟಪದಲ್ಲಿ ನಡೆಯಲಿದೆ. ಅಂದು ಬೆಳಗ್ಗೆ 8.30ಕ್ಕೆ ಮೆರವಣಿಗೆ ಉದ್ಘಾಟನೆಯಾಗಲಿದೆ. ಹೊಸ ಮಠದ ಚಿದಾನಂದ ಸ್ವಾಮೀಜಿ, ಗುರು ಬಸವಲಿಂಗ ಸ್ವಾಮೀಜಿ, ಶಿವಪ್ರಕಾಶ್ ಮೂರ್ತಿ ಭಾಗವಹಿಸುವರು. ಬೆಳಗ್ಗೆ 10.30ಕ್ಕೆ ಜಾನಪದ ಉಪನ್ಯಾಸ ಸಭೆ ನಡೆಯಲಿದ್ದು, ಗಣಪತಿ ಸಚ್ಚಿದಾನಂದ ಸ್ವಾಮೀಜಿ ಸಾನ್ನಿಧ್ಯ ಹಾಗೂ ವಿಜಯಾನಂದ ಸ್ವಾಮೀಜಿ ನೇತೃತ್ವ ವಹಿಸುವರು. ಚಂದನ ದೂರದರ್ಶನದ ವ್ಯವಸ್ಥಾಪಕ ನಿರ್ದೇಶಕ ಮಹೇಶ್ ಜೋಷಿ ಉದ್ಘಾಟಿಸುವರು. ಶಾಂತವಿರೇಂದ್ರ ಸ್ವಾಮೀಜಿ ಆಶಿರ್ವಚನ ನೀಡುವರು. ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ನಿರ್ದೇಶಕ ಎಂ.ಕೆ. ಬಲದೇವಕೃಷ್ಣ ಅಧ್ಯಕ್ಷತೆ ವಹಿಸುವರು. ಕುದೇರು ಮಠದ ಗುರುಶಾಂತ ಸ್ವಾಮೀಜಿ, ಗಾವಡಗೆರೆಯ ಗುರುಲಿಂಗ ಜಂಗಮ ಮಠದ ನಟರಾಜ ಸ್ವಾಮೀಜಿ ಸಮ್ಮುಖ ವಹಿಸುವರು. ಭಾಷ್ಯಂ, ಶರತ್‌ಚಂದ್ರ ಸ್ವಾಮೀಜಿ ಭಾವಚಿತ್ರ ಅನಾವರಣಗೊಳಿಸುವರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement