ಕಾರಿನ ಸ್ಟಿರಿಯೋ ಪ್ಲೇಯರ್ ಕಳವು: ಮೂವರ ಬಂಧನ
ಮೈಸೂರು: ನಗರದ ವಿವಿಧ ಬಡಾವಣೆಗಳಲ್ಲಿ ರಾತ್ರಿ ವೇಳೆ ಕಾರುಗಳ ಸ್ಟಿರಿಯೋ ಪ್ಲೆಯರ್ಸ್ಗಳನ್ನು ಕಳವು ಮಾಡುತ್ತಿದ್ದ ಮೂವರು ಆರೋಪಿಗಳನ್ನು ಎನ್.ಆರ್. ಠಾಣೆ ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಶಾಂತಿನಗರ ನಿವಾಸಿ ಲೇ. ಚೋಟೆಸಾಬ್ ಎಂಬವರ ಪುತ್ರ ಸಲೀಂ ಅ. ಮಾತ್ರೆ ಸಲೀಂ (38), ಶಾಂತಿನಗರ ಬೀಡಿ ಕಾಲೋನಿಯ ಲೇ. ಸೈಯದ್ ಜಾಫರ್ ಎಂಬವರ ಪುತ್ರ ಸೈಯದ್ ತಜಮುಲ್ (21) ಮತ್ತು ಶಾಂತಿನಗರದ ವಲಿ ಅಹಮ್ಮದ್ ಎಂಬವರ ಪುತ್ರ ವಸೀಂ ಅಹಮದ್ (20) ಬಂಧಿತ ಆರೋಪಿಗಳು. ಇವರಿಂದ 2 ಲಕ್ಷ ಮೌಲ್ಯದ ಸ್ಟಿರಿಯೋ ಪ್ಲೆಯರ್ಸ್, ಎಲ್ಸಿಡಿ, ಸ್ಪೀಕರ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬನ್ನಿಮಂಟಪದ ಶಾಲಿಮಾರ್ ಥಿಯೇಟರ್ ಬಳಿ ಪಲ್ಸರ್ ಬೈಕಿನಲ್ಲಿ ಹೋಗುತ್ತಿದ್ದ ಈ ಮೂವರನ್ನು ಭಾನುವಾರ ಹಿಡಿದು ವಿಚಾರಣೆಗೊಳಪಡಿಸಿದಾಗ ವಿವಿಧ ಬಡಾವಣೆಗಳಲ್ಲಿ ರಾತ್ರಿ ವೇಳೆ ಕಾರಿನ ಗ್ಲಾಸ್ ಒಡೆದು ಕಾರಿನಲ್ಲಿದ್ದ ಸ್ಟಿರಿಯೋ ಪ್ಲೆಯರ್, ಎಲ್ಸಿಡಿ, ಸ್ಪೀಕರ್ ಮತ್ತು ಆಂಪ್ಲಿ- ಪ್ಲೆಯರ್ಗಳನ್ನು ಕಳವು ಮಾಡಿದ್ದು ಬೆಳಕಿಗೆ ಬಂದಿದೆ. ಬಂಧಿತರಿಂದ ಎನ್.ಆರ್. ಠಾಣೆಯ 3, ವಿಜಯನಗರ ಠಾಣೆಯ 2, ಉದಯಗಿರಿ ಠಾಣೆಯ 3, ವಿದ್ಯಾರಣ್ಯಪುರಂ ಠಾಣೆಯ 3 ಹಾಗೂ ನಜರ್ಬಾದ್ ಠಾಣೆಯ 2 ಪ್ರಕರಣಗಳು ಸೇರಿ ಒಟ್ಟು 13 ಪ್ರಕರಣಗಳು ಪತ್ತೆಯಾಗಿವೆ. ಪೊಲೀಸ್ ಆಯುಕ್ತ ಕೆ.ಎಲ್. ಸುಧೀರ್, ಡಿಸಿಪಿಗಳಾದ ಬಸವರಾಜ ವೈ. ಮಾಲಗತ್ತಿ, ಕೆ.ಪಿ. ಭೀಮಯ್ಯ, ಎನ್.ಆರ್. ಉಪ ವಿಭಾಗದ ಎಸಿಪಿ ಸಿ.ಡಿ. ಜಗದೀಶ್ ಮಾರ್ಗದರ್ಶನದಲ್ಲಿ ಎನ್.ಆರ್. ಠಾಣೆಯ ಇನ್ಸ್ಪೆಕ್ಟರ್ ಡಿ. ಧನಂಜಯ, ಎಸ್ಐಗಳಾದ ಮುಸ್ಥಾಕ್ ಪಾಷಾ, ಬಿ. ಪರಶುರಾಮ್ ಮತ್ತು ಸಿಬ್ಬಂದಿ ಈ ಪತ್ತೆ ಮಾಡಿದ್ದಾರೆ.