ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಕೈ ಅಧಿಕಾರಕ್ಕೆ ಬಂದಲ್ಲಿ ಕುಂಬಾರ ಮಂಡಳಿ

Parashurama
Updated On : 25 Feb 2013, 1:28 am

ಮೈಸೂರು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದ್ದು, ರಾಜ್ಯಮಟ್ಟದ ಕುಂಬಾರ ಮಂಡಳಿ ಸ್ಥಾಪನೆ ಮಾಡಿ ಅದಕ್ಕೆ ಆರ್ಥಿಕ ಸಹಾಯ ಮಾಡುವುದಾಗಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಭರವಸೆ ನೀಡಿದರು.
ಇಲ್ಲಿನ ನಾದಬ್ರಹ್ಮ ಸಂಗೀತಸಭಾ ಭವನದಲ್ಲಿ ಭಾನುವಾರ ಜಿಲ್ಲಾ ಕುಂಬಾರರ ಸಂಘ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಶೇ.38, ದೇಶದಲ್ಲಿ ಶೇ.52 ರಷ್ಟು ಹಿಂದುಳಿದ ಜನಾಂಗದವರಿದ್ದರೂ ಸಹ ಸಂಘಟನೆ ಕೊರತೆಯಿಂದ ನಮಗೆ ಸಿಗಬೇಕಾದ ಶಿಕ್ಷಣ, ಸಾಮಾಜಿಕ ರಾಜಕೀಯದಲ್ಲಿ ಪಾಲು ಸಿಕ್ಕಿಲ್ಲ. ಕುಂಬಾರಿಕೆ ನಶಿಸಿ ಹೋಗುತ್ತಿದ್ದು, ಪುನರುಜ್ಜೀವನಗೊಳಿಸಬೇಕಾಗಿದೆ. ರಾಜ್ಯದಲ್ಲಿ ಚದುರಿ ಹೋಗಿರುವ ಕುಂಬಾರ ಜನಾಂಗದವರು ಸಂಘಟಿತರಾಗಿ ರಾಜಕೀಯ ಶಕ್ತಿ ಪಡೆದು ಹೋರಾಟದ ಮೂಲಕ ಸಾಮಾಜಿಕ ನ್ಯಾಯ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
ಮಹಾಕಾವ್ಯಗಳನ್ನು ಬರೆದ ವ್ಯಾಸ, ವಾಲ್ಮೀಕಿ, ಕನಕದಾಸ, ಕಾಳಿದಾಸ, ಸರ್ವಜ್ಞ ಎಲ್ಲರೂ ಕೆಳವರ್ಗದಲ್ಲಿ ಹುಟ್ಟಿದವರು, ಹಿಂದುಳಿದವರು. ಸ್ವಾಭಿಮಾನಿಗಳಾಗಿ, ಬುದ್ಧಿವಂತರಾಗಿ, ವಿಚಾರವಂತರಾಗಿ ಇರಬೇಕಾದರೆ ವಿದ್ಯೆ ಕಲಿಯಲೇಬೇಕು. ಕುಂಬಾರ ಜನಾಂಗ ನ್ಯಾಯಯುತ ಪಾಲನ್ನು ಪಡೆಯಲು ನನ್ನ ಸಂಪೂರ್ಣ ಬೆಂಬಲವಿರುವುದಾಗಿ ಅವರು ಹೇಳಿದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement