ಮಹಾರಾಣಿ ಶಾಲೆ ಉಳಿಸಲು ಆಗ್ರಹಿಸಿ ಮೌನ ಪ್ರತಿಭಟನೆ
ಮೈಸೂರು: ಮಹಾರಾಣಿ ಎನ್ಟಿಎಂಎಸ್ ಶಾಲೆ ಉಳಿಸಲು ಆಗ್ರಹಿಸಿ ಮಹಾರಾಣಿ ಮಾದರಿ ಶಾಲೆ (ಎನ್ಟಿಎಂಎಸ್) ಉಳಿಸಿ ಹೋರಾಟ ಸಮಿತಿಯವರು ಇಲ್ಲಿನ ಯಾದವಗಿರಿಯಲ್ಲಿರುವ ಶ್ರೀರಾಮಕೃಷ್ಣ ಆಶ್ರಮದ ಎದುರು ಭಾನುವಾರ ಮೌನ ಪ್ರತಿಭಟನೆ ಹಮ್ಮಿಕೊಂಡಿದ್ದರು.
ಬಾಯಿಕೆ ಕಪ್ಪು ಬಟ್ಟೆ ಕಟ್ಟಿಕೊಂಡು ಮೌನ ಪ್ರತಿಭಟಿಸಿದ ಅವರು, ಶಾಲೆ ವಿಲೀನ, ಮುಚ್ಚುವುದು ಅಂದರೂ ಎರಡೂ ಒಂದೆ. ಶಾಲೆಯ ಸ್ಥಳವನ್ನು ಮಠಕ್ಕೆ ಹಸ್ತಾಂತರಿಸಬಾರದು. ರಾಮಕೃಷ್ಣ ಮಠದವರು ವಿವೇಕಾನಂದರ ಸ್ಫೂರ್ತಿ ಕೇಂದ್ರವನ್ನು ತಾವಾಗಿಯೇ ಬೇರೆಡೆಗೆ ವರ್ಗಾಯಿಸಬೇಕು ಎಂದು ಒತ್ತಾಯಿಸಿದರು. ಸಾಹಿತಿ ಪ್ರೊ.ಕೆ.ಎಸ್. ಭಗವಾನ್, ಪತ್ರಿಕೋದ್ಯಮಿ ರಾಜಶೇಖರ ಕೋಟಿ, ಸಮಿತಿಯ ಸಂಚಾಲಕ ಸ.ರ. ಸುದರ್ಶನ, ಸಂಸ್ಕೃತಿ ಸುಬ್ರಹ್ಮಣ್ಯ, ಪ್ರಗತಿ ಪರ ಹೋರಾಟಗಾರರಾದ ಮೀರಾ ನಾಯಕ್, ಲ. ಜಗನ್ನಾಥ್, ಶಿವಶಂಕರ್, ಡೈರಿ ವೆಂಕಟೇಶ್, ಕೊ.ಸು. ನರಸಿಂಹಮೂರ್ತಿ, ಎಸ್. ಬಾಲಕೃಷ್ಣ, ಮೂಗೂರು ನಂಜುಂಡಸ್ವಾಮಿ, ಜಿ.ಪಿ. ಬಸವರಾಜು ಮೊದಲಾದವರು ಇದ್ದರು. ವಿವಿ ಪುರಂ ಠಾಣೆ ಇನ್ಸ್ಪೆಕ್ಟರ್ ಪ್ರಕಾಶ್ ಮತ್ತು ಸಿಬ್ಬಂದಿ ಬಂದೋಬಸ್ತ್ ಮಾಡಿದ್ದರು.