ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಮಾ. 4ಕ್ಕೆ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ

Parashurama
Updated On : 24 Feb 2013, 10:58 am

ಮೈಸೂರು: ತಾಲೂಕಿನ ಉತ್ತನಹಳ್ಳಿಯ ಜ್ವಾಲಾಮುಖಿ ತ್ರಿಪುರ ಸುಂದರಿ ಕೃಪಾ ಪೋಷಿತ ನಾಟಕ ಮಂಡಳಿಯು ಗ್ರಾಮ ದೇವತೆ ಜ್ವಾಲಾಮುಖಿ ತ್ರಿಪುರ ಸುಂದರಿ ಅಮ್ಮನವರ ಜಾತ್ರಾ ಮಹೋತ್ಸವ ಅಂಗವಾಗಿ ಮಾ. 4 ರಂದು ವಿವಿಧ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಿದೆ.
ಅಂದು ಸಂಜೆ 6ಕ್ಕೆ ಮಂಡಳಿ ಕಲಾವಿದರಿಂದ ಸುಗಮ ಸಂಗೀತ, ಸಂಜೆ 7ಕ್ಕೆ ರಂಗಗೀತೆ ಗಾಯನ, ಸ್ಪರ್ಧಾತ್ಮಕ ಗಾಯನ, ರಾತ್ರಿ 9ಕ್ಕೆ ತಾಲೂಕಿನ ಗ್ರಾಮೀಣ ಕಲಾ ತಂಡಗಳಿಂದ ಜನಪ್ರಿಯ ಪೌರಾಣಿಕ ನಾಟಕಗಳ ದೃಶ್ಯಾವಳಿ, ಮಧ್ಯರಾತ್ರಿ 12ಕ್ಕೆ ತ್ಯಾಗಿ ಎಂಬ ನೀತಿ ಪ್ರಧಾನ ಜಾನಪದ ನಾಟಕವನ್ನು ಮಂಡಳಿ ಕಲಾವಿದರು ಅಭಿನಯಿಸಲಿದ್ದಾರೆ.
ರಂಗಗೀತೆ ಗಾಯನ ಸ್ಪರ್ಧೆಯಲ್ಲಿ ಭಾಗವಹಿಸುವ ಕಲಾವಿದರು 15 ಜನ ಇರಬೇಕು. ಒಂದು ಗೀತೆಗೆ 5 ನಿಮಿಷ ಕಾಲ ಮಿತಿ ಇದೆ. ಪ್ರತಿ ಗಾಯಕರಿಗೆ 200 ಪ್ರವೇಶ ಶುಲ್ಕ. ದೃಶ್ಯಾವಳಿ ಸ್ಪರ್ಧೆಗೆ 5 ತಂಡಗಳು ಭಾಗವಹಿಸಲು ಅವಕಾಶ ಇದೆ. ಒಂದು ದೃಶ್ಯಕ್ಕೆ 30 ನಿಮಿಷ ಕಾಲಮಿತಿ ಇದೆ. ಪ್ರತಿ ತಂಡಕ್ಕೆ 1 ಸಾವಿರ ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ ಎಂದು ಕಾರ್ಯಕ್ರಮ ವ್ಯವಸ್ಥಾಪಕರು ಹಾಗೂ ರಂಗ ನಿರ್ದೇಶಕರಾದ ಜ್ಞಾನೇಶ್, ಗುಡ್ಡಪ್ಪ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಮೊ. 99646- 37085 ಅಥವಾ 98454- 80537 ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement