ರೈತರ ಬದುಕು ಬಿಂಬಿಸುವ ಚೆರ್ರಿ ತೋಪು: ಸುಮತಿ
ಮೈಸೂರು: ಆಂಟನ್ ಚೆಕಾಫ್ ಅವರ ದಿ ಚೆರ್ರಿ ಆರ್ಚ್‌ರ್ಡ್‌ನ ಕನ್ನಡ ಅವತರಣಿಕೆಯಾದ ಚೆರ್ರಿ ತೋಪು ನಾಟಕ ಕೃತಿಯು ರೈತರ ಬದುಕನ್ನು ಬಿಂಬಿಸಿದೆ. ಮೂಲ ಕೃತಿ ರಚನೆಯಾಗಿ 100 ವರ್ಷ ಕಳೆದಿದ್ದರೂ ಇಂದಿಗೂ ಪ್ರಸ್ತುತವಾಗಿದೆ ಎಂದು ರಂಗಕರ್ಮಿ ಕೆ.ಆರ್. ಸುಮತಿ ಹೇಳಿದರು.
ಚಿಂತನ ಚಿತ್ತಾರ ಸಂಸ್ಥೆಯು ಭಾನುವಾರ ರಂಗಾಯಣದ ಶ್ರೀರಂಗ ವೇದಿಕೆಯಲ್ಲಿ ಏರ್ಪಡಿಸಿದ್ದ ಚೆರ್ರಿ ತೋಪು ಪುಸ್ತಕ ಓದು ವಿಮರ್ಶೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೆ.ವಿ. ಅಕ್ಷರ ಅವರು ಕನ್ನಡಕ್ಕೆ ಅನುವಾದಿಸಿರುವ ಈ ಕೃತಿಯು ರೈತರ ಜೀವನವನ್ನು ಕೇಂದ್ರೀಕರಿಸಿದೆ.
ಜಮೀನು ಮಾರಿಕೊಂಡ ರೈತರು ತಮ್ಮ ಬದುಕನ್ನು ಕಳೆದುಕೊಂಡು ಹೇಗೆ ಅನಾಥವಾಗುತ್ತಾರೆ ಎಂಬುದು ಇದರ ಕಥಾ ವಸ್ತುವಾಗಿದೆ. ಕನ್ನಡಕ್ಕೆ ಅನುವಾದಿಸಿರುವ ಕೆ.ವಿ. ಅಕ್ಷರ ಅವರ ಸಾಹಿತ್ಯವೂ ಚೆನ್ನಾಗಿದೆ ಎಂದರು. ಈ ನಾಟಕ ಕೃತಿಯನ್ನು ಓದುತ್ತಿದ್ದರೆ ಚಲನೆ ಇಲ್ಲದಿರುವುದು ಭಾಸವಾಗುತ್ತದೆ. ಆದರೆ, ಕಥೆಯ ಕೊನೆ ತಲುಪವಷ್ಟರಲ್ಲಿ ಎಲ್ಲವೂ ಅರ್ಥವಾಗುತ್ತದೆ.
ಆಗ ಗತಿಯ ಚಲನೆ ಸಿಕ್ಕಿದೆ ಎಂಬುದೂ ಗೊತ್ತಾಗುತ್ತದೆ. ಬದಲಾವಣೆ ಸೂಕ್ಷ್ಮ ವಿಷಯವಾಗಿದ್ದು, ಮಾನವನ ಪ್ರಜ್ಞೆ ಮತ್ತು ಪರಿಸರದಿಂದ ಮಾತ್ರ ಬದಲಾವಣೆ ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ಕಲಾವಿದ ಬಾದಲ್ ನಂಜುಂಡಸ್ವಾಮಿ ಪ್ರತಿಕ್ರಿಯೆ ನೀಡಿದರು.ಭಾಷಾ ತಜ್ಞ ಪ್ರೊ.ಸಿ.ಎಸ್. ರಾಮಚಂದ್ರ ಅತಿಥಿಯಾಗಿದ್ದರು. ಅಧ್ಯಾಪಕ ಗೋವಿಂದರಾಜುಲಕ್ಷ್ಮೀಪುರನಿರೂಪಿಸಿದರು. ರಾಜೇಶ್‌ಪುಸ್ತಕಓದಿದರು. ರವಿಚಂದ್ರ ಚಿಕ್ಕಯ್ಯನಂಹುಡಿ ಭಾವಗೀತೆ ವಾಚಿಸಿದರು.