ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಹಾಸನ ಮೂಲದವ ಸೇರಿದಂತೆ ಐವರು ದರೋಡೆಕೋರರ ಸೆರೆ

Parashurama
Updated On : 24 Feb 2013, 11:39 am

ಮೈಸೂರು: ಬ್ಯಾಂಕಿನಿಂದ ಹಣ ತೆಗೆದುಕೊಂಡು ಹೋಗುತ್ತಿದ್ದ ಇಬ್ಬರ ಕಣ್ಣಿಗೆ ಖಾರದ ಪುಡಿ ಎರಚಿ 9.40 ಲಕ್ಷ ದೋಚಿ ಪರಾರಿಯಾಗಿದ್ದ 5 ಮಂದಿ ಡಕಾಯಿತರನ್ನು ಮೈಸೂರು ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.
  ಹಾಸನ ಮೂಲದ ಗಿರೀಶ (25), ಗುರು (22), ಹುಣಸೂರು ಪಟ್ಟಣದ ಲೇ. ಮುನಿಸ್ವಾಮಿ ಎಂಬವರ ಪುತ್ರ ಚೇತನ್ (25), ಲೇ. ಪದ್ಮರಾಜ್ ಎಂಬವರ ಪುತ್ರ ಚೇತನ್ (27), ಚನ್ನಪಟ್ಟಣ ತಾಲೂಕು ತಗಚಗೆರೆ ಗ್ರಾಮದ ಟಿ.ಎಂ. ಸುಧಾಕರ (24) ಬಂಧಿತ ಆರೋಪಿಗಳು.
  ಬಂಧಿತರಿಂದ 8.90 ಲಕ್ಷ ನಗದು, 7 ಮೊಬೈಲ್ ಹಾಗೂ ಕೃತ್ಯಕ್ಕೆ ಉಪಯೋಗಿಸಿದ 2 ಬೈಕ್‌ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಘಟನೆ ವಿವರ: ಎಸ್‌ಕೆಎಸ್ ಮೈಕ್ರೋಫೈನಾನ್ಸ್ ಸಂಸ್ಥೆಯ ಸುನಿಲ್‌ಕುಮಾರ್ ಮತ್ತು ಪ್ರಸನ್ನಕುಮಾರ ಎಂಬವರು ಫೆ.19 ರಂದು ನಂಜನಗೂಡು ಪಟ್ಟಣದ ಎಸ್‌ಬಿಎಚ್ ಬ್ಯಾಂಕಿನಿಂದ 9.60 ಲಕ್ಷ ಡ್ರಾ ಮಾಡಿಕೊಂಡು ವಿದ್ಯಾನಗರದಲ್ಲಿರುವ ತಮ್ಮ ಸಂಸ್ಥೆಯ ಕಚೇರಿಗೆ ಹೋಗುತ್ತಿದ್ದಾಗ ಕಣ್ಣಿಗೆ ಖಾರದಪುಡಿ ಎರಚಿ 9.40 ಲಕ್ಷ ದೋಚಿಕೊಂಡು ಪರಾರಿಯಾಗಿದ್ದರು.
ಈ ಪ್ರಕರಣದ ಆರೋಪಿ ಗಿರೀಶ್ ಮೈಕ್ರೋಫೈನಾನ್ಸ್ ಕಂಪನಿಯಲ್ಲಿ ಬೆಂಗಳೂರು ಮತ್ತು ಚನ್ನಪಟ್ಟಣ ಶಾಖೆಯಲ್ಲಿ ಕೆಲಸ ಮಾಡಿದ್ದು, ಈಗ ಮುತ್ತೂಟ್ ಫಿನ್‌ಕಾರ್ಫ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಚೇತನ್ ಮತ್ತು ಸುಧಾಕರ್ ಎಂಬವರು ಎಸ್‌ಕೆಎಸ್ ಮೈಕ್ರೋಫೈನಾನ್ಸ್ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಹೆಚ್ಚಿನ ಹಣ ಗಳಿಸುವ ದುರಾಸೆಯಿಂದ ಸಂಚು ರೂಪಿಸಿ ಈ ಕೃತ್ಯ ನಡೆಸಿದ್ದಾರೆ.
 ಎಸ್ಪಿ ಆರ್. ದಿಲೀಪ್, ಹೆಚ್ಚುವರಿ ಎಸ್ಪಿ ಆರ್.ಬಿ. ಮೋಹನ್‌ರೆಡ್ಡಿ, ಡಿವೈಎಸ್ಪಿಗಳಾದ ಎಸ್.ಜಿ. ವಿಜಯಕುಮಾರ್, ಟಿ. ಸಿದ್ದಪ್ಪ ಮಾರ್ಗದರ್ಶನದಲ್ಲಿ ಇನ್ಸ್‌ಪೆಕ್ಟರ್‌ಗಳಾದ ರಘು, ಅಶೋಕ್‌ಕುಮಾರ್, ಪ್ರಸನ್ನಕುಮಾರ್, ಎಸ್‌ಐಗಳಾದ ಶಶಿಕುಮಾರ್, ರವಿಶಂಕರ್, ಹನುಮಂತರಾಜು, ಜೀವನ್, ಸಂತೋಷ್ ಕಶ್ಯಪ್ ಮತ್ತು ಸಿಬ್ಬಂದಿ ಈ ಪತ್ತೆ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement