ಅಕ್ರಮ ಮದ್ಯ ಮಾರಾಟಕ್ಕೆ ತಡೆ (ಸುದ್ದಿ ಸಂಕ್ಷೇಪ)
ಹುಣಸೂರು: ಸ್ಥಳೀಯ ಸಂಸ್ಥೆಗಳ ಚುನಾವಣೆಯ ಹಿನ್ನೆಲೆಯಲ್ಲಿ ಹುಣಸೂರು, ಕೆ.ಆರ್. ನಗರ ಪುರಸಭೆ ಹಾಗೂ ಪಿರಿಯಾಪಟ್ಟಣ, ಎಚ್.ಡಿ. ಕೋಟೆ ಪಟ್ಟಣ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ತಪ್ಪಿಸಲು ಹುಣಸೂರು ಉಪವಿಭಾಗದ ಕಚೇರಿಯಲ್ಲಿ ಹಾಗೂ ಎಲ್ಲಾ ವಲಯ ಕಚೇರಿಗಳಲ್ಲಿಯೂ ಕಂಟ್ರೋಲ್ ರೂಂ ತೆರೆಯಲಾಗಿದೆ. ಮುಕ್ತ, ನ್ಯಾಯಯುತ ಹಾಗೂ ಶಾಂತಿಯುತವಾಗಿ ಚುನಾವಣೆ ನಡೆಸಲು ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ. ಅಕ್ರಮ ಚಟುವಟಿಕೆಗಳು ಕಂಡುಬಂದಲ್ಲಿ ದೂ.08222- 252434, 251690, ಪಿರಿಯಾಪಟ್ಟಣ- 08223- 273373, ಕೆ.ಆರ್. ನಗರ- 08223- 234801, ಎಚ್.ಡಿ. ಕೋಟೆ- 08228- 257095ಗೆ ದೂರು ಸಲ್ಲಿಸಲು ಅಬಕಾರಿ ಉಪಅಧೀಕ್ಷಕ ಆರ್. ನಾಗಶಯನ ಮನವಿ ಮಾಡಿದ್ದಾರೆ.
ಯಡಿಯೂರಪ್ಪ
ಜನ್ಮದಿನಾಚರಣೆ
ನಂಜನಗೂಡು: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ 70ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಕೆಜೆಪಿ ಕಾರ್ಯಕರ್ತರು ಬುಧವಾರ ಇಲ್ಲಿನ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿದರು. ಎಚ್.ಎಸ್. ದಯಾನಂದಮೂರ್ತಿ, ಎಪಿಎಂಸಿ ಮಾಜಿ ಅಧ್ಯಕ್ಷ ಚಿನ್ನಂಬಳ್ಳಿ ಮಂಜುನಾಥ್ ಇದ್ದರು.