ಎರಡು ತಿಂಗಳಾದರೂ ರಸ್ತೆ ಗುಂಡಿ ಮುಚ್ಚಿಲ್ಲ
ಮೈಸೂರು: ಈ ಚಿತ್ರದಲ್ಲಿರುವ ರಸ್ತೆ ತಡೆಗೋಡೆಯು ಎರಡು ತಿಂಗಳಿಗೂ ಹೆಚ್ಚು ಕಾಲ ನಿಂತಿದೆ. ಇದು ಜೆಎಲ್ಬಿ ಮತ್ತು ಕಾಂತರಾಜ ಅರಸ್ ರಸ್ತೆಗಳು ಕೂಡುವ ಬಳಿ ಇದೆ.
ಕೆಲವು ಗುಂಡಿಗಳ ಬಳಿ ಪೊಲೀಸರು ರಸ್ತೆತಡೆಗಳನ್ನು ನಿಲ್ಲಿಸಿ ವಾಹನ ಚಾಲಕರಿಗೆ ಅಪಾಯದ ಎಚ್ಚರಿಕೆ ಕೊಡುತ್ತಿರುವುದು ಸ್ವಾಗತಾರ್ಹ. ಆದರೆ ಈ ತಡೆಗಳು ತಾತ್ಕಾಲಿಕ ಮಾತ್ರವಾಗಿರಬೇಕು. ತಡೆಯೊಂದನ್ನು ನಿಲ್ಲಿಸಿದ ತಕ್ಷಣ ರಸ್ತೆಯ ದುರಸ್ತಿಗೆ ಸಂಬಂಧಿಸಿದವರು ಗುಂಡಿಯನ್ನು ತುಂಬಲು ಕ್ರಮ ತೆಗೆದುಕೊಳ್ಳಬೇಕು. ಆದರೆ ಹೀಗೆ ಆಗುತ್ತಿಲ್ಲ. ಪರಿಣಾಮ ರಸ್ತೆ ತಡೆಯು ತಿಂಗಳಾನುಗಟ್ಟಲೆ ನಿಂತಿದ್ದು, ವಾಹನ ಸಂಚಾರಕ್ಕೆ ಅಡಚಣೆ ಉಂಟು ಮಾಡುತ್ತದೆ ಮತ್ತು ಸ್ವತಃ ಅಪಘಾತಗಳಿಗೆ ಕಾರಣವಾಗುತ್ತದೆ ಎಂದು ಮೈಸೂರು ಗ್ರಾಹಕರ ಪರಿಷತ್ನ ವಿಶ್ವಾಸ್ ಕೃಷ್ಣ ತಿಳಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.