ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ರಾಜೇಂದ್ರ ಶ್ರೀಗಳು, ಶಿಶುನಾಳ ಷರೀಫರು ಸಂತ ಶಬ್ದಕ್ಕೆ ಅನ್ವರ್ಥಕರು

Parashurama
Updated On : 28 Feb 2013, 12:13 pm

ಮೈಸೂರು: ಸುತ್ತೂರು ಮಠದ ರಾಜೇಂದ್ರ ಶ್ರೀಗಳು ಮತ್ತು ಶಿಶುನಾಳ ಶರೀಫರು ಸಂತ ಎನ್ನುವ ಶಬ್ದಕ್ಕೆ ಅನ್ವರ್ಥರು ಎಂದು ಮಾಜಿ ಶಾಸಕ ಎಚ್. ಗಂಗಾಧರನ್ ಹೇಳಿದರು.
ಉದಯಗಿರಿಯ ಜೆಎಸ್‌ಎಸ್ ಶಿಶುನಾಳ ಶರೀಫ ಪ್ರೌಢಶಾಲೆಯಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಸಂಯುಕ್ತವಾಗಿ ಏರ್ಪಡಿಸಿದ್ದ ಸಂಸ್ಥಾಪಕರ ಸಂಸ್ಮರಣೋತ್ಸವ ಮತ್ತು ವಚನಗಾಯನ ದತ್ತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳ ಕಷ್ಟ, ಸಂಕಷ್ಟಗಳನ್ನು ಕಂಡು ರಾಜೇಂದ್ರ ಶ್ರೀಗಳು ವಿದ್ಯಾಸಂಸ್ಥೆಗಳನ್ನು ತೆರೆದಿದ್ದಾರೆ. ನೊಂದ ವಿದ್ಯಾರ್ಥಿಗಳಿಗೆ ಶಿಕ್ಷಣ ಮುಖ್ಯ ಎಂಬ ಕಾರಣಕ್ಕೆ ಇಂತಹ ಸಂಸ್ಥೆಗಳನ್ನು ತೆರೆದಿದ್ದಾರೆ. ಆದ್ದರಿಂದ ರಾಜೇಂದ್ರ ಶ್ರೀಗಳು ಮತ್ತು ಶಿಶುನಾಳ ಶರೀಫರು ಸಂತ ಎನ್ನುವ ಶಬ್ದಕ್ಕೆ ಅನ್ವರ್ಥರು ಎಂದರು.
ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಡಾ.ಎಸ್. ಶಿವರಾಜಪ್ಪ ಮಾತನಾಡಿ, ಬಸವಾದಿ ಶರಣರ ಚಿಂತನೆಗಳು ಸಾರ್ವಕಾಲಿಕ. ಇಂತಹ ಮೌಲಿಕ ಚಿಂತನೆಗಳನ್ನು ಮನ ಮನಕ್ಕೂ ಮುಟ್ಟಿಸುವ ಜವಾಬ್ದಾರಿ ನಮ್ಮದಾಗಬೇಕು. ರಾಜೇಂದ್ರ ಶ್ರೀಗಳು ಶಾಂತಿಧೂತರು, ಶಿಶುನಾಳ ಶರೀಫರು ಸ್ಫೋಟಕ ಚಿಂತನೆಯ ಹರಿಕಾರರು. ಈ ಇಬ್ಬರು ಸಂತರ ಸ್ಮರಣೆ ಇಂದಿನ ಯುವ ಜನಾಂಗಕ್ಕೆ ಪ್ರಸ್ತುತ ಎಂದು ಹೇಳಿದರು.
ಪ್ರಾಧ್ಯಾಪಕ ಪ್ರೊ.ಸುಬ್ಬಪ್ಪ ಉಪನ್ಯಾಸ ನೀಡಿದರು. ಗಾಯಕಿ ಶಾಂತ ಜಗದೀಶ್ ವಚನ ಗಾಯನ ಮಾಡಿದರು. ವಿದ್ಯಾರ್ಥಿಗಳಾದ ಸಾನಿಯಾ, ಉಮ್ಮೇಸಲ್ಮಾ, ಆಯಷಾ ಮತ್ತು ಸಿಮ್ರಾನ್ ಅವರ ವಚನಗಳನ್ನು ಹಾಡಿದರು. ಶಾಲೆಯ ಮುಖ್ಯೋಪಾಧ್ಯಾಯ ಎಸ್. ರಾಮಣ್ಣ ಇದ್ದರು. ಬಿ.ಆರ್. ಶೇಖರ್ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments