ವಿನಾಯಕಗೆ ಡಾಕ್ಟರೇಟ್
ಮೈಸೂರು: ಡಾ.ಎಸ್.ಜೆ. ಮಂಜುನಾಥ್ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ ಆರ್.ಸಿ.ಎನ್. ವಿನಾಯಕ ಅವರು ಸಾದರಪಡಿಸಿದ ಮಹಾಪ್ರಬಂಧವನ್ನು ಮೈಸೂರು ವಿವಿ ಅಂಗೀಕರಿಸಿ ನಿರ್ವಹಣಾ ಆಡಳಿತ ವಿಷಯದಲ್ಲಿ ಪಿಎಚ್.ಡಿ ಪದವಿ ನೀಡಿದೆ.
ರಾಜ್ಯ ಮಟ್ಟದಲ್ಲಿ ಕವಿತೆಗಳ ಆಹ್ವಾನ
ಮೈಸೂರು: ಅಖಿಲ ಭಾರತ ಸರ್ವಜ್ಞ ಸಾಂಸ್ಕೃತಿಕ ಪ್ರತಿಷ್ಠಾನದಿಂದ ಡಾ.ಡಿ.ಎಲ್. ವಿಜಯಕುಮಾರಿ ಅವರ 'ವಿಜಯಗೀತ ಸಂಸ್ಮರಣ ಕಾವ್ಯಕೃತಿ'ಗೆ ರಾಜ್ಯ ಮಟ್ಟದಲ್ಲಿ ಕವಿತೆಗಳನ್ನು ಆಹ್ವಾನಿಸಲಾಗಿದೆ. ಡಿಎಲ್‌ವಿ ಅವರ ವೈಯಕ್ತಿಕ ಬದುಕು ಬರಹದ ಪರಿಚಯವಿರುವಂತಹ ಬೇರೆ ಬೇರೆ ವಿಷಯ ವಸ್ತುವಿರುವ ಕವಿತೆಗಳನ್ನು ಕಳುಹಿಸಬಹುದಾಗಿದೆ. ಆಸಕ್ತರು ಮಾ.1ರೊಳಗೆ ಜಯಪ್ಪ ಹೊನ್ನಾಳಿ, ಸಂಪಾದಕರು, ವಿಜಯಗೀತ ಸಂಸ್ಮರಣ ಕಾವ್ಯಕೃತಿ, ನಂ.132, 5ನೇ ರಸ್ತೆ, 2ನೇ ಹಂತ, ಬೃಂದಾವನ ಬಡಾವಣೆ, ಮೈಸೂರು-570 020. ಇಲ್ಲಿಗೆ ಕಳುಹಿಸುವಂತೆ ಕೋರಲಾಗಿದೆ. ಮೊ.94802 16657 ಸಂಪರ್ಕಿಸಬಹುದು.
ಮಹದೇವಸ್ವಾಮಿ ರಾಜಿನಾಮೆ
ಮೈಸೂರು: ಬಿಜೆಪಿ ನಗರ ಘಟಕದ ಸಹ ಸಂಚಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಎಸ್. ಮಹದೇವಸ್ವಾಮಿ ಅವರು ಸಂಚಾಲಕ ಮತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದ್ದಾರೆ. ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ಶ್ರಮಿಸಿದ ಯಡಿಯೂರಪ್ಪ ಅವರನ್ನು ಪಕ್ಷದಿಂದ ಹೊರ ಹೋಗುವ ಸನ್ನಿವೇಶ ಸೃಷ್ಟಿ ಮಾಡಿ, ಪಕ್ಷದಿಂದ ಹೊರ ಹೋಗಲು ಕಾರಣರಾದ ನಾಯಕರ ವಿರುದ್ಧ ಮನನೊಂದು ರಾಜಿನಾಮೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ.
ಅಂಗವಿಕಲರ ಬಸ್ ಪಾಸ್ ಅವಧಿ ವಿಸ್ತರಣೆ
ಮೈಸೂರು: ಕೆಎಸ್‌ಆರ್‌ಟಿಸಿಯಿಂದ ಅಂಗವಿಕಲರಿಗೆ ನೀಡಿರುವ 2012ರ ರಿಯಾಯಿತಿ ಬಸ್ ಪಾಸ್ ಅವಧಿಯನ್ನು ಮಾ.31ರವರೆಗೆ ವಿಸ್ತರಿಸಲಾಗಿದೆ. ಹಾಗೆ ಸಂಸ್ಥೆಯು ಅನುಮತಿಸಿದ ಪಾಸ್ ನವೀಕರಣಗೊಳಿಸುವ ದಿನಾಂಕವನ್ನು ಪ್ರಕಟಿಸಲಾಗುವುದು ಎಂದು ನಗರ ಸಾರಿಗೆ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ಎನ್. ಶ್ರೀನಿವಾಸ್ ತಿಳಿಸಿದ್ದಾರೆ.
ತರಬೇತಿ
ಜ್ಞಾನದೀಪ್ತಿ ಟ್ರಸ್ಟ್ ವತಿಯಿಂದ ಎಸ್‌ಬಿಐನಲ್ಲಿ ಖಾಲಿ ಇರುವ ಪ್ರೊಬೇಷನರಿ ಆಫೀಸರ್ಸ್ ಹುದ್ದೆಗಳಿಗೆ ಏ. 28 ರಂದು ನಡೆಯುವ ಪರೀಕ್ಷೆಗೆ ಹಾಗೂ ಇತರ ರಾಷ್ಟ್ರೀಕೃತ ಬ್ಯಾಂಕ್‌ಗಳ ಕ್ಲರಿಕಲ್ ಹುದ್ದೆಗಳಿಗೆ ತರಬೇತಿ ನೀಡಲಿದೆ. ಹೆಚ್ಚಿನ ಮಾಹಿತಿಗೆ ಮೊ. 9686072224 ಸಂಪರ್ಕಿಸಬಹುದು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.