ಇಬ್ರಾಹಿಂರಿಂದ ವಚನಗಳ ಅವಹೇಳನ: ಕಾಪುಸಿ ಆಕ್ಷೇಪ
ನಂಜನಗೂಡು: ಶರಣರ ವಚನಗಳನ್ನು ಅಶ್ಲೀಲವಾಗಿ ಅಣಕವಾಡಿದ್ದೆ ಆದಲ್ಲಿ ರಾಜ್ಯದ ಜನತೆ ದಂಗೆ ಏಳಬೇಕಾಗುತ್ತದೆ ಎಂದು ಕಾಂಗ್ರೆಸ್ ಮುಖಂಡ ಸಿ.ಎಂ. ಇಬ್ರಾಹಿಂ ಅವರಿಗೆ ಕೆಜೆಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ಕಾ.ಪು. ಸಿದ್ದಲಿಂಗಸ್ವಾಮಿ ಎಚ್ಚರಿಕೆ ನೀಡಿದ್ದಾರೆ.
ಇಲ್ಲಿನ ಹಳ್ಳದಕೇರಿಯ ಒಂದನೆ ವಾರ್ಡ್‌ನಲ್ಲಿ ಪುರಸಭೆ ಚುನಾವಣೆ ಪ್ರಚಾರದಲ್ಲಿ ಗುರುವಾರ ಮಾತನಾಡಿ, ಸಮಾರಂಭವೊಂದರಲ್ಲಿ ಯಡಿಯೂರಪ್ಪ, ಶೋಭಾ ಕರಂದ್ಲಾಜೆ ಮತ್ತು ತಮ್ಮನ್ನು ಕುರಿತು ಇಬ್ರಾಹಿಂ ಅವರು ಬಸವಣ್ಣನವರ ಅಂಕಿತದೊಂದಿಗೆ ಅಣಕ ವಚನ ಹೇಳಿರುವುದನ್ನು ಪ್ರಸ್ತಾಪಿಸಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಮೆಚ್ಚಿಸಲು ಜೋಕರ್ ರೀತಿಯ ಭಾಷಣ ಮಾಡದಂತೆ ಇಬ್ರಾಹಿಂಗೆ ಸಲಹೆ ನೀಡಿದರು.
ಕೂಡಿಟ್ಟ ಹಣ: ನನ್ನ ರಾಜಕೀಯ ಜೀವನದಲ್ಲಿ ಹತ್ತಾರು ಗ್ರಾಮವನ್ನಾದರೂ ಉದ್ದಾರ ಮಾಡಿದ್ದೇನೆ. ಇಷ್ಟು ವರ್ಷಗಳ ನಿಮ್ಮ ಸಾಧನೆ ಏನು ಎಂದು ಸಿದ್ದರಾಮಯ್ಯಗೆ ಸವಾಲೆಸೆದ ಕಾಪುಸಿ, ಪಾಪದ ಹಣದಿಂದ ನಾನು ರಾಜಕೀಯ ಮಾಡುತ್ತಿಲ್ಲ. 20 ವರ್ಷ ರಾಜಕಾರಣದಲ್ಲಿ ನಾನು ಕೂಡಿಟ್ಟ ಹಣವನ್ನು ಜನತೆಯ ಕಲ್ಯಾಣಕ್ಕಾಗಿ ವಿನಿಯೋಗಿಸುತ್ತಿದ್ದೇನೆ. ಬ್ರಹ್ಮಚಾರಿಯಾಗಿರುವ ನನಗೆ ಅಕ್ರಮ ಆಸ್ತಿ- ಪಾಸ್ತಿ ಮಾಡುವ ಚಟವಿಲ್ಲ ಎಂದು ತಿರುಗೇಟು ನೀಡಿದರು.
ಮುಖಂಡರಾದ ಎಸ್.ಮಹದೇವಯ್ಯ, ಜಿಲ್ಲಾ ಅಧ್ಯಕ್ಷ ಬಿ.ಎಂ. ರಾಮು, ತಾ. ಅಧ್ಯಕ್ಷ ಕೆಂಡಗಣ್ಣಪ್ಪ, ಪ್ರಧಾನ ಕಾರ್ಯದರ್ಶಿ ವಿನಯ್‌ಕುಮಾರ್, ಅಧ್ಯಕ್ಷ ನಾಜೀರ್‌ಖಾನ್, ಜಿಲ್ಲಾ ಹಿಂದುಳಿದ ವರ್ಗದ ಅಧ್ಯಕ್ಷ ಸೋಮಣ್ಣ, ಮಹಿಳಾ ಘಟಕದ ಅಧ್ಯಕ್ಷೆ ನಂದಿನಿ, ಇಲಿಯಾಸ್ ಅಹಮದ್, ವಳಗೆರೆ ಪುಟ್ಟಸ್ವಾಮಿ, ಎನ್.ಸಿ ಬಸವಣ್ಣ, ಮಹದೇವಸ್ವಾಮಿ, ಡಿ.ಪಿ. ಲೋಕೇಶ್, ಎಂ. ಮಲ್ಲಿಕಾರ್ಜುನ, ಪ್ರಕಾಶ್, ಸಿದ್ದರಾಜು ಇದ್ದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.