ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಕೆಜೆಪಿ ವೀಕ್ಷಕರ ನೇಮಕ

Parashurama
Updated On : 28 Feb 2013, 11:04 am

ಮೈಸೂರು: ಸ್ಥಳೀಯ ಸಂಸ್ಥೆಗಳ ಚುನಾವಣೆಯ ಹಿನ್ನೆಲೆಯಲ್ಲಿ ಈ ಕೆಳಕಂಡವರನ್ನು ಕೆಜೆಪಿ ವೀಕ್ಷಕರಾಗಿ ನೇಮಿಸಲಾಗಿದೆ ಎಂದು ಜಿಲ್ಲಾಧ್ಯಕ್ಷ ಬಿ.ಎಂ. ರಾಮು ತಿಳಿಸಿದ್ದಾರೆ.
ನಂಜನಗೂಡು ಪುರಸಭೆ- ಎಸ್. ಶಿವಮೂರ್ತಿ ಕಾನ್ಯ, ಜಿ. ವಸಂತಕುಮಾರ್. ಬನ್ನೂರು ಪುರಸಭೆ- ಎಚ್.ಪಿ. ಗೋಪಾಲ್, ದೊರೆಸ್ವಾಮಿ ನಾಯಕ. ಹುಣಸೂರು ಪುರಸಭೆ- ಚಿನ್ನಂಬಳ್ಳಿ ಮಂಜುನಾಥ್, ಶಿವಣ್ಣ. ಕೆ.ಆರ್. ನಗರ ಪುರಸಭೆ- ಚಂದ್ರಶೇಖರ್, ಚೌಹಳ್ಳಿ ಮಹದೇವಪ್ಪ. ಟಿ. ನರಸೀಪುರ ಪಪಂ- ಮಹದೇವಸ್ವಾಮಿ, ಇಬ್ರಾಹಿಂ. ಪಿರಿಯಾಪಟ್ಟಣ ಪಪಂ- ಜಗದೀಶ್, ಎಂ. ನಿಂಗರಾಜು. ಎಚ್.ಡಿ. ಕೋಟೆ ಪಪಂ ಪರಶುರಾಮಪ್ಪ, ಸಿ.ಡಿ. ವೆಂಕಟೇಶ್. ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಯ ಪಾಲಿಕೆ- ನಾಗರಾಜಪ್ಪ, ನಾಗರಾಜು.
ಕಾಂಗ್ರೆಸ್ ಉಸ್ತುವಾರಿ: ನಗರದ ಅಜೀಜ್‌ಸೇಠ್ ಬ್ಲಾಕ್ ಚುನಾವಣಾ ಉಸ್ತುವಾರಿ ಸಮಿತಿಗೆ ಎಸ್.ಜೆ. ರಾಧಾಮಣಿ, ಎನ್.ಆರ್. ನಾಗೇಶ್, ಜಗದೀಶ್‌ಕುಮಾರ್, ಎಂ. ಲಿಂಗರಾಜು ಅವರನ್ನು ನಗರಾಧ್ಯಕ್ಷ ಸಿ. ದಾಸೇಗೌಡ ನೇಮಿಸಿದ್ದಾರೆ ಎಂದು ವಕ್ತಾರ ಎಚ್.ಎ. ವೆಂಕಟೇಶ್ ತಿಳಿಸಿದ್ದಾರೆ.
ನಾಮಪತ್ರ ವಾಪಸ್: ನಗರಪಾಲಿಕೆಯ 46ನೇ ವಾರ್ಡಿನಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದು, ಟಿಕೆಟ್ ಸಿಗದಿದ್ದರಿಂದ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದೆ. ಆದರೆ ಪಕ್ಷದ ಕಾರ್ಯಕರ್ತರ ಒತ್ತಾಯ ಹಾಗೂ ಪಕ್ಷದ ಒಳಿತಿಗಾಗಿ ನಾಮಪತ್ರ ವಾಪಸ್ ಪಡೆದಿರುವುದಾಗಿ ಜೆ. ಇಂದ್ರಾಣಿ ತಿಳಿಸಿದ್ದಾರೆ. ಪಕ್ಷದ ಅಭ್ಯರ್ಥಿಯ ಗೆಲವಿಗೆ ಶ್ರಮಿಸುವುದಾಗಿ ಅವರು ತಿಳಿಸಿದ್ದಾರೆ.
ಮತ ಮಾರಾಟಕ್ಕಿಲ್ಲ: ಆಮ್ ಆದ್ಮಿ ಪಕ್ಷವು ನನ್ನ ಮತ ಮಾರಾಟಕ್ಕಿಲ್ಲ ಅಭಿಯಾನವನ್ನು ಫೆ.28 ರಿಂದ ಆರಂಭಿಸಿದ್ದು, ಮಾ.3 ರವರೆಗೆ ನಡೆಸಲಿದೆ ಎಂ.ಎಸ್. ವಿನೋದ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments