ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಫೇಸ್‌ಬುಕ್‌ನಲ್ಲಿ ಅವಹೇಳನ: ನಾಪತ್ತೆಯಾಗಿದ್ದ ಆರೋಪಿ ಸೆರೆ

Parashurama
Updated On : 28 Feb 2013, 11:16 am

ಹುಣಸೂರು: ಫೇಸ್‌ಬುಕ್‌ನಲ್ಲಿ ಧರ್ಮವೊಂದರ ಬಗ್ಗೆ ಅವಹೇಳನಾಕಾರಿಯಾಗಿ ಚಿತ್ರಿಸಿ ನಾಪತ್ತೆಯಾಗಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಇಲ್ಲಿನ ಮುತ್ತುಮಾರಮ್ಮ ದೇವಸ್ಥಾನ ಬೀದಿಯ ನಿವಾಸಿ ಪಳನಿಸ್ವಾಮಿ ಎಂಬವರ ಪುತ್ರ ಸೆಂಧಿಲ್‌ಕುಮಾರ್ (35) ಬಂಧಿತ ಆರೋಪಿ.
ಘಟನೆ ವಿವರ: ಫೆ. 25 ರಂದು ರಾತ್ರಿ ಧರ್ಮವೊಂದರ ವಿರುದ್ಧ ಅಂತರ್ಜಾಲ ತಾಣವೊಂದರಲ್ಲಿ ಅವಹೇಳನಾಕಾರಿ ಚಿತ್ರಣ ಮುದ್ರಿಸಿ ಪಟ್ಟಣದಾದ್ಯಂತ ಉದ್ರಿಕ್ತ ಪರಿಸ್ಥಿತಿಗೆ ಕಾರಣನಾಗಿದ್ದ ಈತನನ್ನು ಬಂಧಿಸುವಂತೆ ಪ್ರತಿಭಟನೆ ನಡೆಸಿದ್ದರು.
ಡಿವೈಎಸ್ಪಿ ವಿಜಯಕುಮಾರ್ ಮತ್ತು ಸರ್ಕಲ್ ಇನ್‌ಸ್ಪೆಕ್ಟರ್ ಗಜೇಂದ್ರಪ್ರಸಾದ್ ನೇತೃತ್ವದಲ್ಲಿ ಎರಡು ತಂಡ ರಚಿಸಿ ಕಾರ್ಯಾಚರಣೆ ನಡೆಸಿ ಮಂಡ್ಯ ನಗರದ ಮನೆಯೊಂದರಲ್ಲಿದ್ದ ಸೆಂಧಿಲ್‌ನನ್ನು ಗುರುವಾರ ಬೆಳಗ್ಗೆ ಬಂಧಿಸಲಾಗಿದೆ.
ತನಿಖೆ: ಫೇಸ್‌ಬುಕ್‌ನಲ್ಲಿ ಧರ್ಮವೊಂದರ ಬಗ್ಗೆ ಅವಹೇಳನಾಕಾರಿಯಾಗಿ ಚಿತ್ರಿಸಿ ನಾಪತ್ತೆಯಾಗಿದ್ದ ಸೆಂಧಿಲ್‌ನನ್ನು ಬಂಧಿಸಲಾಗಿದ್ದು ಹಾಗೂ ಗಲಭೆಗೆ ಕಾರಣರಾದ 11 ಮಂದಿಯನ್ನು ಬಂಧಿಸಿದ್ದು, ಕೆಲವರನ್ನು ಷರತ್ತುಬದ್ಧ ಜಾಮೀನು ಮೇರೆಗೆ ಬಿಡುಗಡೆ ಮಾಡಿ, ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂತೆ ರದ್ದು: ಪಟ್ಟಣದಾದ್ಯಂತ 144 ಸೆಕ್ಷನ್ ಜಾರಿಯಲ್ಲಿರುವುದರಿಂದ ಗುರುವಾರ ನಡೆಯಬೇಕಿದ್ದ ಸಂತೆ ರದ್ದಾಗಿದ್ದರಿಂದ ರೈತಾಪಿ ವರ್ಗದ ಜನತೆ ಪರದಾಡಿದರು.
ಕಲ್ಯಾಣ ಮಂಟಪದಲ್ಲಿ ಮದುವೆ ಸಮಾರಂಭಗಳು ಎಂದಿನಂತೆ ನಡೆದವು. ಶನಿವಾರವೂ 144 ಸೆಕ್ಷನ್ ಜಾರಿ ಮುಂದುವರಿಯಲಿದೆ.
ಅಂಗಡಿ- ಮುಂಗಟ್ಟುಗಳಲ್ಲಿ ವ್ಯಾಪಾರ ವಹಿವಾಟು ಎಂದಿನಂತೆ ನಡೆಯುತ್ತಿದೆ ಎಂದು ಸರ್ಕಲ್ ಇನ್‌ಸ್ಪೆಕ್ಟರ್ ಗಜೇಂದ್ರ ಪ್ರಸಾದ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments