ಸಾಮಾಜಿಕ ಪಿಡುಗು ಬಗ್ಗೆ ಬೆಳಕು ಚೆಲ್ಲಿದ ಚಿಣ್ಣರು...
ಮೈಸೂರು: ನಗರದ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಗುರುವಾರ ಅಯೋಜಿಸಿದ್ದ ಮೀನಾ ಮೇಳ 2012- 13 ಕಾರ್ಯಕ್ರಮದಲ್ಲಿ ಜಿಲ್ಲೆಯ ಸುಮಾರು 950ಕ್ಕೂ ಹೆಚ್ಚು ಶಾಲೆಗಳ 1500ಕ್ಕೂ ಹೆಚ್ಚು ಮೀನಾ ತಂಡದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಅವರು ಸಮಾಜದಲ್ಲಿನ ಬಾಲಕಾರ್ಮಿಕ ಪದ್ಧತಿ, ಬಾಲ್ಯವಿವಾಹ, ವರದಕ್ಷಣೆ ಪಿಡುಗು, ಲಿಂಗ ತಾರತಮ್ಯ ಸೇರಿದಂತೆ ವಿವಿಧ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದರು.
ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನೃತ್ಯ ರೂಪಕ, ಕಿರು ನಾಟಕ, ನೃತ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಈ ಮೇಳದಲ್ಲಿ ಮೈಸೂರು ನಗರ, ತಾಲೂಕು, ಟಿ. ನರಸೀಪುರ, ನಂಜನಗೂಡು, ಎಚ್.ಡಿ. ಕೋಟೆ, ಹುಣಸೂರು, ಕೆ.ಆರ್. ನಗರ, ಪಿರಿಯಾಪಟ್ಟಣ ತಾಲೂಕುಗಳಿಂದ 950 ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪಿರಿಯಾಪಟ್ಟಣ ತಾಲೂಕು ಕಂಪ್ಲಾಪುರ ಸರ್ಕಾರಿ ಶಾಲೆ ಮಕ್ಕಳು ಬಾಲ್ಯ ವಿವಾಹ ಕುರಿತು ಕಿರು ನಾಟಕ ಪ್ರದರ್ಶಿಸಿದರು. ತೊಣಚಿ ಕೊಪ್ಪಲು ಸರ್ಕಾರಿ ಶಾಲೆ ಮಕ್ಕಳು ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವ ಕುರಿತು ನಾಟಕ ಪ್ರದರ್ಶಿಸಿದರು. ಕುಂಬಾರ ಕೊಪ್ಪಲು ಶಾಲೆ ಮಕ್ಕಳು ಯೋಧ ಚಲನಚಿತ್ರದ ದಿಕ್ಕು ದಿಕ್ಕು ಭಾವಬಿಂದು ಗೀತೆಗೆ ನರ್ತಿಸಿದರು.
ಜಿಲ್ಲೆಯಲ್ಲಿ 950 ಶಾಲೆಯ 2850 ಮಕ್ಕಳು ಮೀನಾ ತಂಡದ ಸದಸ್ಯರಾಗಿದ್ದಾರೆ. ಈಗಾಗಲೇ ಮೀನಾ ತಂಡದ ಮಕ್ಕಳು, ಶಾಲೆ ಬಿಟ್ಟ ನೂರಾರು ಮಕ್ಕಳನ್ನು ಶಾಲೆಗೆ ಕರೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೆ, ಗ್ರಾಮೀಣ ಪ್ರದೇಶದಲ್ಲಿನ ಹಲವು ಬಾಲ್ಯ ವಿವಾಹದ ಮಾಹಿತಿಯನ್ನು ಶಿಕ್ಷಕರಿಗೆ ನೀಡುವ ಮೂಲಕ ತಮ್ಮ ಸಹಪಾಠಿಗಳನ್ನು ವಿವಾಹದ ಸಂಕೋಲೆಯಿಂದ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.