ಈದ್ ಮಿಲಾದ್: ರೋಗಿಗಳಿಗೆ ಹಣ್ಣು ವಿತರಣೆ
ಮೈಸೂರು: ನಗರದಲ್ಲಿ ಮುಸ್ಲಿಂ ಬಾಂಧವರು ಪ್ರವಾದಿ ಮೊಹಮ್ಮದ್ ಜನ್ಮ ದಿನಾಚರಣೆ ಅಂಗವಾಗಿ ಸಡಗರ ಸಂಭ್ರಮದೊಂದಿಗೆ ಶುಕ್ರವಾರ ಈದ್ ಮಿಲಾದ್ ಆಚರಿಸಿದರು. ಮೊಹಮ್ಮದರ ಜನ್ಮ ದಿನಾಚರಣೆ ಹಿನ್ನೆಲೆಯಲ್ಲಿ ಜಲೂಸ್-ಇ-ಮೊಹಮದಿ ಮೆರವಣಿಗೆ ನಗರದ ವಿವಿಧ ಬಡಾವಣೆಗಳಲ್ಲಿ ನಡೆಯಿತು. ಈದ್ ಮಿಲಾದ್ ಸಮಿತಿ ಹಾಗೂ ಅರೇಬಿಕ್ ಕಾಲೇಜು ವಿದ್ಯಾರ್ಥಿಗಳು ಮೆರವಣಿಗೆ ನಡೆಸಿದರು. ಮೆರವಣಿಗೆಯು ತನ್ಜೀಮ್ ಅಹಲ ಸುನ್ನತೋ ಜಮಾತ್, ಮದೀನಾ ಕಾಂಪ್ಲೆಕ್ಸ್, ಅಜೀಜ್ ಸೇಟ್ ಜೋಡಿ ರಸ್ತೆ, ಶಾಂತಿನಗರಗಳಿಂದ ಆರಂಭವಾಗಿ ಅಶೋಕ ರಸ್ತೆಯ ಮಿಲಾದ್ ಪಾರ್ಕ್ನಲ್ಲಿ ಅಂತ್ಯಗೊಂಡವು. ಮೆರವಣಿಗೆಗೂ ಮುನ್ನ ಮುಸ್ಲಿಂ ಬಾಂಧವರು ಫಾತೆಹಾಖಾನಿ- ಒ- ದಾರುದ್-ಒ- ಸಲಾಂ ಸಲ್ಲಿಸಿದರು. ಮೆರವಣಿಗೆಯಲ್ಲಿ ತನ್ಜೀಮ್ ಅಹಲ ಸುನ್ನತೋ ಜಮಾತ್ನಿಂದ ಪಡೆದ ಪವಿತ್ರ ಸ್ಥಳಗಳ ಸ್ತಬ್ಧಚಿತ್ರ ಪ್ರದರ್ಶಿಸಿದರು. ಸಂಜೆ ಡಾ. ಜಾಕಿರ್ ಹುಸೇನ್ ವೃತ್ತದಲ್ಲಿ ಮೆರವಣಿಗೆ ನಡೆಯಿತು. ಈದ್ ಮಿಲಾದ್ ಅಂಗವಾಗಿ ಬಿ.ಜೆಡ್. ಜಮೀರ್ ಅಹ್ಮದ್ ಖಾನ್ ಅಭಿಮಾನಿ ಬಳಗದ ಪದಾಧಿಕಾರಿಗಳು ಕೆ.ಆರ್. ಆಸ್ಪತ್ರೆ ರೋಗಿಗಳಿಗೆ ಹಣ್ಣು ವಿತರಿಸಿದರು. ರಾಜ್ಯಾಧ್ಯಕ್ಷ ಅಲ್ಹಾಜ್ ಅಜೀಜುಲ್ಲಾ, ಡಾ. ಕಿರಣ್ಕಾಳಯ್ಯ, ಡಾ. ಗೋಪಿನಾಥ್, ಮಟ್ರೂನ್ ಪಾಟೀಡ್, ರಾಜ್ಯ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷ ಎಂ.ಡಿ.ರೆಹಮತ್ ಉಲ್ಲಾ, ಅಪ್ಸರ್ ಅಹಮದ್, ಶರೀಫ್, ಜಬೀವುಲ್ಲ, ಖಲೀಂ ಪಾಷ ಇದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.