ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಉಚಿತ ನೇತ್ರ ತಪಾಸಣಾ ಶಿಬಿರ

Parashurama
Updated On : 26 Jan 2013, 12:37 pm

ಹುಣಸೂರು:  ಕರ್ನಾಟಕ ರಕ್ಷಣಾ ವೇದಿಕೆಯು ಇಲ್ಲಿನ ಉರ್ದು ಶಾಲೆಯಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ ನಡೆಸಿತು. ಕರವೇ ಅಧ್ಯಕ್ಷ ಪುರುಷೋತ್ತಮ ಮಾತನಾಡಿ, ಕಣ್ಣಿನ ದೋಷವುಳ್ಳ 110 ಮಂದಿಯನ್ನು ಆಯ್ಕೆ ಮಾಡಿ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಮತ್ತು ಲೆನ್ಸ್ ಅಳವಡಿಸಲು ಕೊಯಮತ್ತೂರಿನ ಅರವಿಂದ ಕಣ್ಣಿನ ಆಸ್ಪತ್ರೆಗೆ ಕಳುಹಿಸಲಾಗಿದೆ. ವೇದಿಕೆಯ ವತಿಯಿಂದ ಶೀಘ್ರದಲ್ಲೆ ತಾಲೂಕು ಮಟ್ಟದ ರಕ್ತದಾನ ಶಿಬಿರ ಹಾಗೂ ಬೆಂಗಳೂರಿನ ಸಪ್ತಗಿರಿ ಹಾರ್ಟ್ ಫೌಂಡೇಶನ್ ಸಹಯೋಗದಲ್ಲಿ ಹೃದಯ ತಪಾಸಣಾ ಶಿಬಿರ ಆಯೋಜಿಸಲಾಗುವುದು ಎಂದು ತಿಳಿಸಿದರು. ಅರವಿಂದ ಆಸ್ಪತ್ರೆಯ ಡಾ. ಸುನೀತಾ, ಡಾ. ಮಹೇಶ್ ಪರೀಕ್ಷಿಸಿದರು. ಕರವೇ ಪದಾಧಿಕಾರಿಗಳಾದ ಬಲರಾಂ, ನಾಗಣ್ಣ, ಅಪ್ಸರ್, ಬೆಟ್ಟೇಗೌಡ, ಸುಬ್ಬಣ್ಣ, ಮುನಾವರ್ ಪಾಷಾ ಭಾಗವಹಿಸಿದ್ದರು.
ಹೊಲಿಗೆ ತರಬೇತಿ
ಹುಣಸೂರು:  ಇಲ್ಲಿನ ಸ್ನೇಹಜೀವಿ ತರಬೇತಿ ಸಂಸ್ಥೆ ಕೈಮಗ್ಗ ಮತ್ತು ಜವಳಿ ಇಲಾಖೆಯ ಸಹಯೋಗದಲ್ಲಿ ಪವರ್ ಮಿಷಿನ್ ಟೈಲರಿಂಗ್‌ಗಿಗೆ ಯುವಕ, ಯುವತಿಯರಿಂದ ಅರ್ಜಿ ಆಹ್ವಾನಿಸಿದೆ. ಮಾಹಿತಿಗಾಗಿ ಸಂಸ್ಥೆಯ ವ್ಯವಸ್ಥಾಪಕ ಸಚಿನ್ ಪ್ರಕಾಶ್ ಮೊ. 9620329201 ಸಂಪರ್ಕಿಸಬಹುದು.
ಶ್ರದ್ಧಾಂಜಲಿ
ಹುಣಸೂರು:  ಇತ್ತೀಚೆಗೆ ನಿಧನರಾದ ತಾಲೂಕಿನ ಕರಿಮುದ್ದನಹಳ್ಳಿ ಗ್ರಾಪಂ ಪಿಡಿಒ ಆಗಿದ್ದ ಲಕ್ಷ್ಮಯ್ಯ ಸ್ಮರಣಾರ್ಥ ಗ್ರಾಪಂ ಕಚೇರಿಯಲ್ಲಿ  ಶ್ರದ್ಧಾಂಜಲಿ ಸಲ್ಲಿಸಲಾಯಿತು. ಗ್ರಾಪಂ ಅಧ್ಯಕ್ಷ ಸುನಂದಮ್ಮ, ಉಪಾಧ್ಯಕ್ಷೆ ಮಾಣಮ್ಮ, ನೂತನ ಪಿಡಿಒ ಪ್ರಕಾಶ್, ಬಿಲ್ ಕಲೆಕ್ಟರ್‌ಗಳಾದ ಸತ್ಯವೇಲು, ವೆಂಕಟರಾಜು ಮೃತರ ಸೇವೆ ಸ್ಮರಿಸಿದರು. ಗ್ರಾಪಂ ಸದಸ್ಯರಾದ ಶ್ರೀನಿವಾಸು, ಬಿ.ಸಿ.ನಾಗರಾಜು ಸೇರಿದಂತೆ ಎಲ್ಲ ಸದಸ್ಯರು, ಸಿಬ್ಬಂದಿ ವರ್ಗ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.
ನಿಂಗೇಗೌಡ ನೇಮಕ
ಕೆ.ಆರ್.ನಗರ:  ಸರ್ವಜನಾಂಗ ಹಿತರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷರಾಗಿ ನಿವೃತ್ತ ಪ್ರಾಂಶುಪಾಲ ಕೆ. ನಿಂಗೇಗೌಡ ಅವರನ್ನು ನೇಮಕ ಮಾಡಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments