ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಬಿಜೆಪಿ ಶಾಸಕರ ರಾಜಿನಾಮೆಗೆ ನಾವು ಹೊಣೆಯಲ್ಲ: ಧನಂಜಯ್

Parashurama
Updated On : 26 Jan 2013, 12:39 pm

ಮೈಸೂರು:  ಕರ್ನಾಟಕ ಜನತಾ ಪಕ್ಷವು ರಾಜ್ಯ ಬಿಜೆಪಿ ಸರ್ಕಾರ ಬೀಳಿಸುತ್ತಿಲ್ಲ. ಅಲ್ಲಿನ ಶಾಸಕರೇ ಮುಖ್ಯಮಂತ್ರಿ ಅವರ ನಾಯಕತ್ವ ಒಪ್ಪದೇ ತಮ್ಮ ಸ್ಥಾನಗಳಿಗೆ ರಾಜಿನಾಮೆ ನೀಡುತ್ತಿದ್ದಾರೆ ಎಂದು ಕೆಜೆಪಿ ಪ್ರಚಾರ ಸಮಿತಿ ಅಧ್ಯಕ್ಷ ವಿ. ಧನಂಜಯಕುಮಾರ್ ಸ್ಪಷ್ಟಪಡಿಸಿದರು.
ಶುಕ್ರವಾರ ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕರ ರಾಜಿನಾಮೆಯಲ್ಲಿ ನಮ್ಮ ಕೈವಾಡವಿಲ್ಲ. ಇಬ್ಪರು ಸಚಿವರು ಸೇರಿದಂತೆ 13 ಮಂದಿ ಶಾಸಕರ ರಾಜಿನಾಮೆಯನ್ನು ಸ್ವೀಕರ್ ಕೆ.ಜಿ. ಬೋಪಯ್ಯ ಅವರು ಸ್ವೀಕರಿಸದ ಹಿನ್ನೆಲೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಲಹೆ ನೀಡಲು ಹೋಗಿದ್ದರೆ ಹೊರತು ಸರ್ಕಾರ ಬೀಳಿಸಲು ಅಲ್ಲ. ಈ ಬೆಳವಣಿಗೆ ರಾಜ್ಯಪಾಲರು ಗಂಭೀರವಾಗಿ ಪರಿಗಣಿಸುತ್ತಿದ್ದು ಈ ತಿಂಗಳೊಳಗಾಗಿ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂದರು.
ಈಗಿರುವ ಸರ್ಕಾರ ಸತ್ತು ಹೋಗಿದೆ. ಸ್ಪಷ್ಟ ಬಹುಮತವಿಲ್ಲದೆ ಅಲುಗಾಡುತ್ತಿದ್ದು, ಕೂಡಲೇ ಮುಖ್ಯಮಂತ್ರಿ ಅವರು ನೈತಿಕ ಹೊಣೆ ಹೊತ್ತು ವಿಧಾನಸಭೆ ವಿಸರ್ಜಿಸಬೇಕು. ಫೆ.15ರೊಳಗೆ ಸದಸ್ಯತ್ವ ನೋಂದಣಿ ಪೂರ್ಣಗೊಳಿಸಲಿದೆ. ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಬೂತ್ ಮಟ್ಟದಲ್ಲಿ ತಂಡ ರಚಿಸಲಾಗುವುದು ಎಂದರು. ಸಚಿವ ಎಸ್.ಎ. ರಾಮದಾಸ್ 3 ದಿನಗಳ ಹಿಂದೆ ತಮ್ಮ ಯುವಕರ ತಂಡವನ್ನು ಗೋವಾ ಪ್ರವಾಸಕ್ಕೆ ಕಳುಹಿಸಿದ್ದಾರೆ. ಮುಂದೆ ಮಹಿಳೆಯರನ್ನು ಪ್ರವಾಸಕ್ಕೆ ಕಳುಹಿಸಲಿದ್ದಾರೆ ಎಂಬ ಮಾಹಿತಿ ಬಂದಿದೆ ಎಂದು ದೂರಿದರು.
ಚಾಮುಂಡಿಪುರಂನಲ್ಲಿ ತೆರೆಯಲಾದ ಕೆಜೆಪಿ ಕೆ.ಆರ್.ಕ್ಷೇತ್ರದ ಕಾರ್ಯಾಲಯವನ್ನು ಧನಂಜಯಕುಮಾರ್ ಉದ್ಘಾಟಿಸಿದರು. ಕೆ.ಆರ್.ಕ್ಷೇತ್ರದ ಅಭ್ಯರ್ಥಿ ಎಚ್.ವಿ.ರಾಜೀವ್, ರಾಜ್ಯ ಕೆಜೆಪಿ ಕಾರ್ಯದರ್ಶಿ ಕಾ.ಪು. ಸಿದ್ದಲಿಂಗಸ್ವಾಮಿ, ಜಿಲ್ಲಾಧ್ಯಕ್ಷ ರಾಮು ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments