ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

'ಮತದಾನ ಹಕ್ಕಲ್ಲ, ಕರ್ತವ್ಯ'

Parashurama
Updated On : 25 Jan 2013, 10:30 am

ಮೈಸೂರು:  ಈ ದೇಶದ ಪ್ರತಿಯೊಬ್ಬ ಪ್ರಜೆಯೂ ಮತದಾನ ಮೂಲಭೂತ ಹಕ್ಕು ಎಂದು ಅರ್ಥೈಸಿಕೊಳ್ಳದೇ ಅದು ನಮ್ಮ ಕರ್ತವ್ಯ ಎಂದು ತಿಳಿದುಕೊಳ್ಳಬೇಕು ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ ನ್ಯಾಯಾಲಯದ ನ್ಯಾ. ಮೋಹನ ಶ್ರೀಪಾದ ಸಂಕೊಳ್ಳಿ ಕರೆ ನೀಡಿದರು.
ಭಾರತ ಚುನಾವಣಾ ಆಯೋಗ ಮತ್ತು ಜಿಲ್ಲಾ ಚುನಾವಣಾಧಿಕಾರಿ ಕಚೇರಿ ಶುಕ್ರವಾರ ಮಾನಸ ಗಂಗೋತ್ರಿಯ ರಾಣಿ ಬಹದ್ಧೂರ್ ಸಭಾಂಗಣದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಳೆದ 6 ದಶಕಗಳಿಂದ ನಮ್ಮ ದೇಶ 15 ಮಹಾ ಚುನಾವಣೆಗಳನ್ನು ಎದುರಿಸಿದ್ದು, ಒಟ್ಟಾರೆ 351 ವಿಧಾನಸಭಾ ಚುನಾವಣೆಗಳು ನಡೆದಿವೆ. ಆದರೆ, ಅಕ್ಷರಸ್ಥರಿರುವ ಕಡೆ ಶೇ. 40 ಕ್ಕಿಂತ ಕಡಿಮೆ ಮತದಾನವಾಗಿದ್ದರೆ, ಅನಕ್ಷರಸ್ಥರಿರುವ ಕಡೆಗಳಲ್ಲಿ ಶೇ. 70 ಕ್ಕಿಂತ ಹೆಚ್ಚು ಮತದಾನ ನಡೆದಿದೆ. ಯುವ ಜನತೆ ಶೇ.20ರಷ್ಟು ಮಾತ್ರ ಮತ ಚಲಾಯಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪಾಲಿಕೆ ಆಯುಕ್ತ ಡಾ.ಎಂ.ಆರ್. ರವಿ ಮಾತನಾಡಿ, ಸರ್ಕಾರದಿಂದ ಇಷ್ಟು ದಿನಗಳಾದರೂ ಒಳ್ಳೆಯದಾಗಿಲ್ಲ ಎಂದು ಆರೋಪಿಸುವ ಮೊದಲು ಈ ಪರಿಸ್ಥಿತಿಗೆ ನಾವೇ ಕಾರಣ ಎಂದು ತಿಳಿದುಕೊಳ್ಳಬೇಕು.
ಸಂವಿಧಾನವನ್ನು ಯಾರೋ ನಮಗೆ ದತ್ತು ಕೊಟ್ಟಿಲ್ಲ. ನಮ್ಮ ಉನ್ನತಿಗಾಗಿ ನಾವೇ ತಯಾರಿಸಿಕೊಂಡ ಒಂದು ವ್ಯವಸ್ಥೆಯೇ ಸಂವಿಧಾನ ಎಂದರು.
ಆರ್ಟಿವಿ ಬರಬೇಕಿದೆ:  ನಮ್ಮ ದೇಶದಲ್ಲಿ ಆರ್ಟಿಐ (ಮಾಹಿತಿ ಹಕ್ಕು ಕಾಯಿದೆ) ಮತ್ತು ಆರ್ಟಿಇ (ಶಿಕ್ಷಣ ಹಕ್ಕು ಕಾಯಿದೆ) ಅಮೂಲಾಗ್ರ ಬದಲಾವಣೆಗೆ ನಾಂದಿ ಹಾಡಿವೆ. ಇತ್ತೀಚಿನ ವರ್ಷಗಳು ಇವು ಸಾಮಾನ್ಯನ ಸಂಕಷ್ಟಗಳಿಗೆ ಸ್ಪಂದಿಸುತ್ತಿವೆ. ಹಾಗೆಯೇ ಆರ್ಟಿವಿ (ಮತದಾನ ಹಕ್ಕು ಕಾಯಿದೆ) ಜಾರಿಗೆ ತಂದರೆ ಅದರಿಂದಲೂ ನಿರೀಕ್ಷತ ಮಟ್ಟದಲ್ಲಿ ದೇಶ ಬೆಳವಣಿಗೆ ಹೊಂದಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ಪ್ರಭಾರ ಜಿಲ್ಲಾಧಿಕಾರಿ ಡಾ.ಎಂ.ಎನ್. ಅಜಯ್ ನಾಗಭೂಷಣ್ ಅಧ್ಯಕ್ಷತೆ ವಹಿಸಿದ್ದರು. ಹೆಚ್ಚುವರಿ ಜಿಲ್ಲಾಧಿಕಾರಿ ನಾಗನಾಯಕ್, ಎಂಡಿಎ ಆಯುಕ್ತ ಡಾ.ಸಿ.ಜಿ. ಬೆಟ್ಸೂರ್ ಮಠ, ಉಪವಿಭಾಗಾಧಿಕಾರಿ ಬಸವರಾಜು, ತಹಸೀಲ್ದಾರ್ ನವೀನ್ ಜೋಸೆಫ್ ಇದ್ದರು.ಪ್ರಕಾಶ್ ಗೆಜ್ಜೆ ಮತದಾರರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಆರ್ಐ ನಿಸಾರ್ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments