ಮಹಿಳಾ ಹಾಕಿ: ಲಕ್ನೋ ಕ್ವಾರ್ಟರ್ ಫೈನಲ್ಗೆ
ಮೈಸೂರು: ಮೇಜರ್ ಧ್ಯಾನ್ಚಂದ್ ಆಹ್ವಾನಿತ ಮಹಿಳಾ ಹಾಕಿ ಪಂದ್ಯಾವಳಿಯಲ್ಲಿ ಲಕ್ನೋ ಇಲವೆನ್ ತಂಡವು 12 ಪಾಯಿಂಟ್ಗಳೊಂದಿಗೆ ಅಗ್ರಸ್ಥಾನಕ್ಕೇರಿದ್ದು, ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.
ಇಲ್ಲಿನ ಮೈಸೂರು ವಿವಿ ಸ್ಫೋರ್ಟ್ಸ್ ಪೆವಿಲಿಯನ್ನಲ್ಲಿ ನಡೆಯುತ್ತಿರುವ ಈ ಪಂದ್ಯಾವಳಿಯ 'ಎ' ಗುಂಪಿನ ಲೀಗ್ ಪಂದ್ಯಾವಳಿಯಲ್ಲಿ ಲಕ್ನೋ ಇಲವೆನ್ ತಂಡವು ತ್ರಿವೇಂಡ್ರಂನ ಎಸ್ಎಐ ಸ್ಫೋರ್ಟ್ಸ್ ಹಾಸ್ಟೆಲ್ ವಿರುದ್ಧ ಜಯ ಗಳಿಸುವ ಮೂಲಕ 12 ಪಾಯಿಂಟ್ಗಳೊಂದಿಗೆ ಅಗ್ರಸ್ಥಾನಕ್ಕೇರಿತು. ಕಿರಣ್ ಕುಮಾರಿ ಮತ್ತು ಚಾಂದ ಗುಪ್ತ ಕ್ರಮವಾಗಿ 17 ಮತ್ತು 16ನೇ ನಿಮಿಷದಲ್ಲಿ ಬಾರಿಸಿದ ಗೋಲಿನ ನೆರವು ಪಡೆದ ಲಕ್ನೋ ತಂಡ 2-1 ಅಂತರದಲ್ಲಿ ಜಯಗಳಿಸಿತು.
ಎಸ್ಎಐ ಸ್ಫೋರ್ಟ್ಸ್ ಹಾಸ್ಟೆಲ್ ತಂಡವು 'ಎ' ಗುಂಪಿನಲ್ಲಿ 9 ಅಂಕ ಪಡೆದು, ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ಅಂತೆಯೇ ಕರ್ನಾಟಕದ ಕೂಡ್ಗಿ ಸ್ಫೋರ್ಟ್ಸ್ ಹಾಸ್ಟೆಲ್ ತಂಡವು ಶಹಾಪುರ ಇಲವೆನ್ ತಂಡದ ವಿರುದ್ಧ ಲೀಗ್ ಪಂದ್ಯದ ಅಂತಿಮ ಸುತ್ತಿನಲ್ಲಿ 5-0 ಅಂತರದಲ್ಲಿ ಗೆಲುವು ಸಾಧಿಸಿ ಕ್ವಾರ್ಟರ್ ಫೈನಲ್ಗೆ ಅರ್ಹತೆ ಪಡೆದಿದೆ.
'ಬಿ' ಗುಂಪಿನಲ್ಲಿ ಮೈಸೂರಿನ ಡಿವೈಎಸ್ಎಸ್ ತಂಡವು ಕೊವಿಲ್ ಪಟ್ಟಿಯ ರಾಜೀವ್ ಗಾಂಧಿ ಸ್ಫೋರ್ಟ್ಸ್ ಕ್ಲಬ್ ವಿರುದ್ಧ 25-0 ಅಂತರದ ಗೆಲುವು ಸಾಧಿಸುವುದರೊಂದಿಗೆ ಒಟ್ಟು 4 ಪಂದ್ಯಗಳಿಂದ 10 ಅಂಕ ಸಂಪಾದಿಸಿದೆ. ಡಿವೈಎಸ್ಎಸ್ ತಂಡದ ರಶ್ಮಿ 6 ಗೋಲು ಬಾರಿಸುವ ಮೂಲಕ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.