ಮುಸ್ಲಿಮರಿಂದ ಸಂಭ್ರಮದ ಈದ್ ಮಿಲಾದ್
ಕೆ.ಆರ್.ನಗರ: ಈದ್ ಮಿಲಾದ್ ಹಬ್ಬದ ಅಂಗವಾಗಿ ಪೈಗಂಬರ್ ಹುಟ್ಟುಹಬ್ಬವನ್ನು ಇಲ್ಲಿನ ಮುಸ್ಲಿಂ ಬಾಂಧವರು ವಿಜೃಂಭಣೆಯಿಂದ ನೆರವೇರಿಸಿ, ಮೆರವಣಿಗೆ ನಡೆಸಿದರು.
ಜಾಮೀಯಾ ಮಸೀದಿಯ ಮುಂಭಾಗದಲ್ಲಿ ಶುಕ್ರವಾರ ಮಧ್ಯಾಹ್ನ ಸಮಾವೇಶಗೊಂಡು, ಅಲ್ಲಿಂದ ಮೆರವಣಿಗೆ ಹೊರಟು ಮಸೀದಿ ರಸ್ತೆ, ಗರುಡಗಂಭ ವೃತ್ತ, ಮೈಸೂರು ರಸ್ತೆಯ ಮೂಲಕ ಅಂಬೇಡ್ಕರ್ ಪ್ರತಿಮೆ ತಲುಪಿ, ನಂತರ ವಾಣಿವಿಲಾಸ ರಸ್ತೆಯ ಮೂಲಕ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.ವಿವಿಧ ಕಲಾ ತಂಡಗಳು, ಮೋಟಾರ್ ಬೈಕ್ ರ್ಯಾಲಿ, ಅಲಂಕೃತ ವಾಹನಗಳ ಸಾಲು, ಸಾರ್ವಜನಿಕರ ಗಮನ ಸೆಳೆಯಿತು. ಸಾಹಸ ಪ್ರದರ್ಶನ, ನೃತ್ಯ ವಿಶೇಷವಾಗಿತ್ತು.
ಮೌಲಾನ ಇಬ್ರಾಹಿಂ ಸಾಬ್, ಜಾಮೀಯಾ ಮಸೀದಿ ಕಮಿಟಿ ಅಧ್ಯಕ್ಷ ಸೂಫಿಮಕ್ತಾರ್ ಅಹಮದ್, ಉಪಾಧ್ಯಕ್ಷ ಸೈಯ್ಯದ್ ತಾಜುದ್ದೀನ್ ಷಾ ಖಾದ್ರಿ, ಕಾರ್ಯದರ್ಶಿ ಮಕ್ಬುಲಾ ಖಾನ್, ಸಹ ಕಾರ್ಯದರ್ಶಿ ಅನ್ಸರ್, ಸದಸ್ಯ ಸೈಯ್ಯದ್ ಮಜೀದ್, ಡಾ.ಮೆಹಬೂಬ್ ಖಾನ್, ಪುರಸಭಾ ಸದಸ್ಯ ಮಹಮ್ಮದ್ ಸಿರಾಜ್, ಮಾಜಿ ಸದಸ್ಯ ಸೈಯ್ಯದ್ ಅಸ್ಲಾಂ, ಮಾಜಿ ಪುರಸಭಾ ಅಧ್ಯಕ್ಷ ರಿಜ್ವಾನ್ ಉಲ್ಲಾಖಾನ್, ಅನೀಫ್, ಶಹೀದ್ ಟಿಪ್ಪು ಸುಲ್ತಾನ್ ಟ್ರಸ್ಟ್ ಅಧ್ಯಕ್ಷ ಸೈಯ್ಯದ್ ಜಬೀರ್, ಅಮೀರ್ ಅಹಮದ್ ಖಾನ್ ಇದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.