ಶಾಸಕರ ಚಿತ್ರ ತೆರವಿಗೆ ಆಗ್ರಹ
ಪಿರಿಯಾಪಟ್ಟಣ: ಡಾ. ಅಂಬೇಡ್ಕರ್ ಭಾವಚಿತ್ರದ ಸರಿಸಮವಾಗಿ ಶಾಸಕ ಕೆ.ವೆಂಕಟೇಶ್ ಭಾವಚಿತ್ರ ಅಳವಡಿಸಿರುವುದನ್ನು 2 ದಿನದೊಳಗಾಗಿ ತೆರವುಗೊಳಿಸದಿದ್ದಲ್ಲಿ, ಉಗ್ರ ಹೋರಾಟ ನಡೆಸುವುದಾಗಿ ಜೆಡಿಎಸ್ ಪಕ್ಷದ ಎಸ್ಸಿ,ಎಸ್ಟಿ ಘಟಕದ ಕಾರ್ಯಾಧ್ಯಕ್ಷ ಹೇಮಂತ್ ಕುಮಾರ್ ಎಚ್ಚರಿಸಿದರು.
ತಾಲೂಕಿನ ಬೆಟ್ಟದಪುರ ಗ್ರಾಮದ ಮುಖ್ಯ ವೃತ್ತದಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸಂವಿಧಾನ ದಿನಾಚರಣೆ ಕಾರ್ಯಕ್ರಮದ ಪ್ರಯುಕ್ತ ಪ್ರಚಾರಕ್ಕಾಗಿ ಅಳವಡಿಸಲಾಗಿರುವ ಫ್ಲೆಕ್ಸ್ನಲ್ಲಿ ಅಂಬೇಡ್ಕರ್ ಭಾವಚಿತ್ರದ ಸಮನಾಗಿ ಶಾಸಕರ ಭಾವಚಿತ್ರ ಅಳವಡಿಸಿರುವುದನ್ನು ಸುದ್ದಿಗೋಷ್ಠಿಠಿಯಲ್ಲಿ ಅವರು ಖಂಡಿಸಿದರು.
ಜೆಡಿಎಸ್ ಪಕ್ಷದ ಎಸ್ಸಿ, ಎಸ್ಟಿ ಘಟಕದ ತಾಲೂಕು ಅಧ್ಯಕ್ಷ ಚೆನ್ನಪ್ಪ, ದಸಂಸ ಮುಖಂಡರಾದ ರಾಜಣ್ಣ, ಜಗದೀಶ್, ರಾಜಯ್ಯ, ರಂಗನಾಥ್, ಧನರಾಜ್, ವೆಂಕಟೇಶ್, ನಟೇಶ್ ಇದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.