ಸರ್ಕಾರಿ ಅನುದಾನ ಸದ್ಬಳಕೆಯಾಗಲಿ: ತಿಮ್ಮನಾಯಕ
ಪಿರಿಯಾಪಟ್ಟಣ: ಸರ್ಕಾರದ ಅನುದಾನಗಳು ಸದ್ಬಳಕೆಯಾದಾಗ ಮಾತ್ರ ಜನಪತ್ರಿನಿಧಿಗಳಿಗೆ ರಾಜಕೀಯವಾಗಿ ಬೆಲೆ ಸಿಗುತ್ತದೆ ಎಂದು ಪಪಂ ಉಪಾಧ್ಯಕ್ಷ ತಿಮ್ಮನಾಯಕ ಹೇಳಿದರು. ಇಲ್ಲಿನ ವಾರ್ಡ್ ನಂ.13 ರಲ್ಲಿ 6 ಲಕ್ಷ ವೆಚ್ಚದ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಪಪಂ ವತಿಯಿಂದ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದ್ದು, ಇದನ್ನು ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು. ಜೆಡಿಎಸ್ ಪಕ್ಷದ ತಾಲೂಕು ಅಧ್ಯಕ್ಷ ಕೆ.ಮಹದೇವ್ ಮಾತನಾಡಿದರು. ಪಪಂ ಸದಸ್ಯರಾದ ಮಂಜುನಥ್ ಸಿಂಗ್, ವೇಣುಗೋಪಾಲ್, ಪಿ. ಮಹದೇವ್, ನಾಗಣ್ಣ, ಶಿವಣ್ಣ, ರಂಗಣ್ಣ ಇದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.