'ಹಿಂದೂ- ಮುಸ್ಲಿಮರ ಸೋದರ ಬಾಳ್ವೆ'
ಮೈಸೂರು: ಇಲ್ಲಿನ ಉದಯಗಿರಿ 2ನೇ ಹಂತದ ಶ್ರೀ ವಿಘ್ನೇಶ್ವರ ಪ್ರಸನ್ನ ಭಕ್ತ ಮಂಡಲಿಯಲ್ಲಿ ನಡೆದ ಧನುರ್ಮಾಸದ ಪೂಜಾ ಮಹೋತ್ಸವದ ಸಮಾರೋಪ ಸಮಾರಂಭವನ್ನು ಶಾಸಕ ತನ್ವೀರ್ಸೇಠ್ ಉದ್ಘಾಟಿಸಿದರು.
ನಂತರ ಅವರು ಮಾತನಾಡಿ, ಉದಯಗಿರಿಯ ಬಡಾವಣೆಯಲ್ಲಿ ಹಿಂದೂ ಮುಸಲ್ಮಾನರು ಸಹೋದರರಂತೆ ಬಾಳುತ್ತಿದ್ದು, ಇಂತಹ ಪ್ರದೇಶದಲ್ಲಿ ತಿಂಗಳಗಟ್ಟಲೆ ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿರುವುದು ಸಂತಸದ ಸಂಗತಿ. ಮುಂಬರುವ ದಿನಗಳಲ್ಲಿ ದೇವಾಲಯಕ್ಕೆ ನನ್ನ ಸಹಕಾರ ನೀಡುವುದಾಗಿ ಹೇಳಿದರು.
ಪೂಜಾ ಮಹೋತ್ಸವದಲ್ಲಿ 33 ದಿನಗಳ ಕಾಲ ಸಂಪೂರ್ಣ ರಾಮಾಯಣ ಎಂಬ ಹರಿಕಥೆಯನ್ನು ನಡೆಸಿಕೊಟ್ಟ ವಿದುಷಿ ವಿ. ಮಾಲಿನಿ ಅವರನ್ನು ಶಾಸಕರು ಸನ್ಮಾನಿಸಿದರು.
ಮಾಜಿ ಮೇಯರ್ ಅಯೂಬ್ಖಾನ್ ಮಾತನಾಡಿದರು. ಮುಖ್ಯ ಅತಿಥಿಯಾಗಿ ಎಸ್ವಿಇಐ ವಿದ್ಯಾಸಂಸ್ಥೆಯ ಅಧ್ಯಕ್ಷ ಎಂ.ಕೆ.ಪೋತರಾಜ್, ನಗರಪಾಲಿಕೆ ಸದಸ್ಯ ಎಚ್.ಎನ್. ಶ್ರೀಕಂಠಯ್ಯ, ಕಸಾಪ ಅಧ್ಯಕ್ಷ ಎಂ. ಚಂದ್ರಶೇಖರ್, ಮಾಜಿ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಮಾಜಿ ಉಪಮೇಯರ್ ಟಿ. ದೇವರಾಜು ಇತರರಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.