ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಕಾವೇರಿ ಪ್ಯಾಕೆಜಿಂಗ್ ಕ್ಲಸ್ಟರ್‌ಗೆ 16 ಕೋಟಿ ಅನುದಾನ

Parashurama
Updated On : 28 Jan 2013, 12:05 pm

ಮೈಸೂರು:  ಮೈಸೂರಿನಲ್ಲಿ ಆರಂಭವಾಗುತ್ತಿರುವ ಕಾವೇರಿ ಪ್ಯಾಕೆಜಿಂಗ್ ಕ್ಲಸ್ಟರ್‌ಗೆ ಕೇಂದ್ರ ಸರ್ಕಾರದಿಂದ 16 ಕೋಟಿ ಅನುದಾನ ದೊರೆತಿದೆ.
ಇದರಿಂದ 60 ಸಣ್ಣ ಉದ್ದಿಮೆಗಳಿಗೆ ಪ್ರಯೋಜನವಾಗಲಿದೆ. ಪ್ಯಾಕೆಜಿಂಗ್ ಕ್ಲಸ್ಟರ್‌ನ ಉದ್ಯಮಿಗಳಿಗೆ ಅಗತ್ಯ ತರಬೇತಿ ನೀಡಲಾಗಿದೆ. ಈ ರೀತಿಯ ಉದ್ಯಮಗಳ ಯಶೋಗಾಥೆ ಅರಿಯಲು  ಉದ್ದಿಮೆಗಳ ತಂಡವನ್ನು ಚೀನಾಗೂ ಕಳುಹಿಸಲಾಗಿತ್ತು.
ಜನರಲ್ ಎಂಜಿನಿಯರಿಂಗ್ ಕ್ಲಸ್ಟರ್‌ಗೆ 8.5 ಕೋಟಿ, ಪ್ರಿಟಿಂಗ್ ಕ್ಲಸ್ಟರ್‌ಗೆ 7 ಕೋಟಿ, ಆಟೋ ಕ್ಲಸ್ಟರ್‌ಗೆ 10 ಕೋಟಿ ಸಹಾಯಧನ ದೊರೆಯಲಿದೆ. ಆಟೋ ಕ್ಲಸ್ಟರ್‌ಗೆ ಎಂಡಿಎ ಈಗಾಗಲೇ ನಿವೇಶನ ನೀಡಿದೆ ಎಂದು ಮೈಸೂರು ಕೈಗಾರಿಕಾ ಸಂಘದ ಪ್ರಧಾನ ಕಾರ್ಯದರ್ಶಿ ಎಸ್. ಸುರೇಶ್‌ಕುಮಾರ್ ಜೈನ್ ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.
ಮೈಸೂರಿನಲ್ಲಿ ನಮ್ಮ ಸಂಘವನ್ನು ರಾಜೀವ್ ಗಾಂಧಿ ಉದ್ಯೋಗ ಮಿತ್ರ ಎಂದು ಪರಿಗಣಿಸಲಾಗಿದೆ. ಇದು ಮುಂದಿನ ತಿಂಗಳಿಂದ ಕಾರ್ಯಾರಂಭ ಮಾಡಲಿದ್ದು, ಇದರಿಂದ ಮೈಸೂರು, ಮಂಡ್ಯ ಹಾಗೂ ಚಾಮರಾಜನಗರ ಜಿಲ್ಲಾ ಸಣ್ಣ ಉದ್ದಿಮೆದಾರರಿಗೆ ಅನುಕೂಲವಾಗಲಿದೆ. ಮೈಸೂರಿನ ಸಿಐಐನಲ್ಲಿ ಬೌದ್ಧಿಕ ಆಸ್ತಿ ಹಕ್ಕು ಸೌಲಭ್ಯ ಕೇಂದ್ರ ಆರಂಭಿಸಲಾಗಿದೆ. ರಾಷ್ಟ್ರೀಯ ಸಣ್ಣ ಕೈಗಾರಿಕೆಗಳ ನಿಗಮದ ವ್ಯವಸ್ಥಾಪಕರ ಹುದ್ದೆ ಭರ್ತಿ, ಎಂಎಸ್‌ಎಂಇ ಪುನಾರಂಭಕ್ಕೆ ಕೇಂದ್ರ ಸರ್ಕಾರ ಕ್ರಮಕೈಗೊಂಡಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments