ಕೈ ಬರಹ ಸ್ಪರ್ಧೆ ವಿಜೇತರು
ಮೈಸೂರು: ಯೂನಿವರ್ಸಲ್ ಅಕಾಡೆಮಿ ಹಾಗೂ ಮಹಿಳಾ ಮತ್ತು ಮಕ್ಕಳ ಕ್ಷೇಮಾಭಿವೃದ್ಧಿ ಸಂಘ ಗಣರಾಜ್ಯೋತ್ಸವ ಅಂಗವಾಗಿ ಮರಿಮಲ್ಲಪ್ಪ ಪ್ರೌಢಶಾಲೆಯಲ್ಲಿ ಕನ್ನಡ, ಇಂಗ್ಲಿಷ್ ಕೈಬರಹ ಸ್ಪರ್ಧೆ ಏರ್ಪಡಿಸಿತ್ತು.
1 ಮತ್ತು 2ನೇ ತರಗತಿಯ ಕನ್ನಡ ಕೈಬರಹ ಸ್ಪರ್ಧೆಯಲ್ಲಿ ಆದಿತ್ಯ ವಿ.ಭಾರದ್ವಾಜ್ ಪ್ರಥಮ, ರಶ್ಮಿತಾ ಶೇಖರ್ ದ್ವಿತೀಯ ಮತ್ತು ಚಿನ್ಮಯ ತೃತೀಯ ಸ್ಥಾನ ಪಡೆದಿದ್ದಾರೆ. 3 ಮತ್ತು 4ನೇ ತರಗತಿ ವಿಭಾಗದಲ್ಲಿ ಎಸ್. ಶ್ರೇಯಸ್ ಭೈರಪ್ಪ ಪ್ರಥಮ, ಬಿ.ಎಸ್. ಪ್ರಿಯ ದ್ವಿತೀಯ, ಎಂ. ಭೂಮಿಕಾ ತೃತೀಯ, 5, 6 ಮತ್ತು 7ನೇ ತರಗತಿ ವಿಭಾಗದಲ್ಲಿ ಆರ್. ಚಂದನ ಪ್ರಥಮ, ಜೆ. ತೃಪ್ತಿ ದ್ವಿತೀಯ, ನವ್ಯ ಕೆ.ಗೌಡ ತೃತೀಯ ಸ್ಥಾನ ಪಡೆದಿದ್ದಾರೆ.
8, 9 ಮತ್ತು 10ನೇ ತರಗತಿ ವಿಭಾಗದಲ್ಲಿ ಆರ್. ಪ್ರಿಯಾಂಕ ಪ್ರಥಮ, ಸಹನ ಕೆ. ಹೊಳ್ಳ ದ್ವಿತೀಯ, ಎನ್. ಸೂರ್ಯ ತೃತೀಯ ಸ್ಥಾನ ಪಡೆದಿದ್ದಾರೆ.
ಆಂಗ್ಲ ಕೈ ಬರಹ ಸ್ಪರ್ಧೆಯಲ್ಲಿ 1 ಮತ್ತು 2ನೇ ತರಗತಿ ವಿಭಾಗದಲ್ಲಿ ಆರ್. ಪ್ರಜ್ವಲ್ ಪ್ರಥಮ, ಎಂ.ಪಿ. ಪ್ರಣಮ್ಯ ದ್ವಿತೀಯ, ಎನ್. ಅಂಜನಾ ತೃತೀಯ, 3 ಮತ್ತು 4ನೇ ತರಗತಿ ವಿಭಾಗದಲ್ಲಿ ಎಂ. ಹೇಮಂತ್ ಕುಮಾರ್ ಪ್ರಥಮ, ಎಸ್. ಕೀರ್ತನ ದ್ವಿತೀಯ, ಸುಜನ್ ಎಸ್. ಗೌಡ ತೃತೀಯ, 5, 6 ಮತ್ತು 7ನೇ ತರಗತಿ ವಿಭಾಗದಲ್ಲಿ ಎಚ್.ಎಲ್. ಋತಿಕ್ ಪ್ರಥಮ, ಎಂ. ಮಂಜುಶ್ರೀ ದ್ವಿತೀಯ, ಕೆ.ಎಸ್. ನಿಧಿ ತೃತೀಯ ಬಹುಮಾನ ಪಡೆದಿದ್ದಾರೆ.
8, 9 ಮತ್ತು 10ನೇ ತರಗತಿ ವಿಭಾಗದಲ್ಲಿ ಟಿ.ಎನ್. ಕೌಶಿಕ್ ಪ್ರಥಮ, ಎಂ.ಇ. ಸ್ಪೂರ್ತಿ ದ್ವಿತೀಯ, ಕೆ.ಎ. ಮಾನಸಿ ತೃತೀಯ ಸ್ಥಾನ ಪಡೆದಿದ್ದಾರೆ ಎಂದು ಅಕಾಡೆಮಿಯ ಮುಖ್ಯಸ್ಥ ಪ್ರಕಾಶ್ ತಿಳಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.