ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

'ಜ್ಞಾನವನ್ನು ಸಂಪೂರ್ಣ ಅರಿತಾಗ ಯಶಸ್ಸು'

Parashurama
Updated On : 29 Jan 2013, 12:12 pm

ಮೈಸೂರು: ಜ್ಞಾನ ಕೇವಲ ಮಾಹಿತಿ ಅಷ್ಟೆ. ಅದನ್ನು ಸಂಪೂರ್ಣವಾಗಿ ಅರಿತಾಗ ಯಶಸ್ಸು ಸಾಧ್ಯ ಎಂದು ನಿವೃತ್ತ ಮೇ.ಜ. ಎಂ.ಎಸ್. ಪ್ರಕಾಶ್ ಹೇಳಿದರು.ಕುವೆಂಪುನಗರದ ಪ್ರಮತಿ ಹಿಲ್‌ವ್ಯೂ ಅಕಾಡೆಮಿಯಲ್ಲಿ ನಡೆದ 64ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಕರ್ತವ್ಯ ಮತ್ತು ಪ್ರಯತ್ನಗಳು ನಾವು ದೇಶಕ್ಕಾಗಿ ಸಲ್ಲಿಸುವ ಮಹತ್ವದ ಸೇವೆಗಳಾಗಿವೆ. ಪ್ರತಿ ಯಶಸ್ಸಿನ ಹಿಂದೆ ತಾಳ್ಮೆ ಇದೆ. ಅದನ್ನು ನಾವು ಬಳಸಿಕೊಳ್ಳಬೇಕು ಎಂದರು. ಶಾಲಾ ಕಾರ್ಯದರ್ಶಿ ಎಚ್.ವಿ. ರಾಜೀವ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಗಣರಾಜ್ಯ ಅರ್ಥಪೂರ್ಣವಾಗಬೇಕಾದರೆ ನಾವೆಲ್ಲರೂ ಭಾರತೀಯರೆಂದು ತಿಳಿದುಕೊಳ್ಳಬೇಕು. ಭಾಷಾವಾರು ಪ್ರಾಂತ್ಯವಾರು ಎಂಬ ಸಂಕುಚಿತ ಭಾವನೆ ತೊರೆದು, ವಿಶಾಲ ಮನೋಭಾವನೆ ಬೆಳೆಸಿಕೊಳ್ಳುವಂತೆ ಹೇಳಿದರು. ಖಜಾಂಚಿಗಳಾದ ಫಣಿರಾಜ್, ಪ್ರಾಂಶುಪಾಲ ಸಿ.ಎಸ್. ಸುದರ್ಶನ ಹಾಗೂ ಆಡಳಿತ ಅಧಿಕಾರಿ ಭೋಜಮ್ಮ, ಆಡಳಿತ ಮಂಡಳಿಯವರು, ಶಿಕ್ಷಕ, ಶಿಕ್ಷಕೇತರ ವೃಂದದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments