ಮಕ್ಕಳಿಗೆ ಬದುಕುವ ಶಿಕ್ಷಣ ಮುಖ್ಯ: ರಾಜೀವ್
ಮೈಸೂರು: ಮಕ್ಕಳಿಗೆ ಪರೀಕ್ಷೆ ಎದುರಿಸುವ ಶಿಕ್ಷಣಕ್ಕಿಂತ ಬದುಕುವ ಶಿಕ್ಷಣ ಬೇಕು ಎಂದು ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ವಿ. ರಾಜೀವ್ ಹೇಳಿದರು.
ಶ್ರೀ ಅವಧೂತ ದತ್ತಪೀಠ, ಶ್ರೀ ರಾಮಾನುಜ ಮಿಷನ್ ಟ್ರಸ್ಟ್, ಎಸ್ಕೆಆರ್ಎಸ್ಪಿ ಶ್ರೀ ವೇದವ್ಯಾಸ ಯೋಗ ಪ್ರತಿಷ್ಠಾನ ಮತ್ತು ಅಮೃತ ವಿದ್ಯಾಲಯ ಸೀನಿಯರ್ ಸೆಕೆಂಡರಿ ಶಾಲೆ ಸಂಯುಕ್ತವಾಗಿ ಗಣಪತಿ ಸಚ್ಚಿದಾನಂದಾಶ್ರಮದ ನಾದಮಂಟಪದಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಅಧ್ಯಯನ ಸೂತ್ರ - ಪರೀಕ್ಷಾ ಕೌಶಲ - ಆತ್ಮವಿಶ್ವಾಸ ವರ್ಧನೆ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ನಾವು ಓದುವಾಗ ಮಾರ್ಗದರ್ಶನ ನೀಡುವವರಾಗಲಿ ಅಥವಾ ಆತ್ಮವಿಶ್ವಾಸ ತುಂಬುವುವರಾಗಲಿ ಇರಲಿಲ್ಲ. ಆದರೆ ಇಂದು ನಿಮಗೆ ಎಲ್ಲಾ ರೀತಿಯ ಮಾರ್ಗದರ್ಶನ ಸಿಗುತ್ತಿದೆ. ವಿದ್ಯಾರ್ಥಿಗಳು ಇದನ್ನು ಸದುಪಯೋಗ ಮಾಡಿಕೊಳ್ಳಬೇಕು. ಅಲ್ಲದೆ ರಾಜ್ಯ ಸರ್ಕಾರ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದವರಿಗೆ ಮತ್ತೆ ಒಂದೆ ತಿಂಗಳಲ್ಲಿ ಪರೀಕ್ಷೆ ಬರೆಯುವ ಅವಕಾಶ ನೀಡಿರುವುದು ಸ್ವಾಗತಾರ್ಹ ಎಂದರು.
ಮಕ್ಕಳಿಗೆ ಪರೀಕ್ಷೆ ಎದುರಿಸುವ ಶಿಕ್ಷಣಕ್ಕಿಂತ, ಮೂಲಭೂತವಾಗಿ ಬದುಕುವ ಶಿಕ್ಷಣ ನೀಡಬೇಕು. ವಿದ್ಯಾರ್ಥಿಗಳಾದವರು ಏಕಾಗ್ರತೆ ಮತ್ತು ಪರೀಕ್ಷಾ ಸಿದ್ಧತೆಗೆ ಯೋಜನೆ ರೂಪಿಸಿಕೊಂಡರೆ ಯಶಸ್ಸು ಲಭಿಸುತ್ತದೆ ಎಂದು ಹೇಳಿದರು.
ಶ್ರೀ ಅವಧೂತ ದತ್ತಪೀಠದ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ, ಅಮೃತ ವಿದ್ಯಾಲಯದ ಶ್ರೀ ನೀರಜಾಮೃತ ಚೈತನ್ಯ ಮಾತಾಜಿ, ಉದ್ಯಮಿ ಗೋಪಿನಾಥ ಶೆಣೈ, ಸಾವಿತ್ರಿ ಗೋಪಿನಾಥ ಶೆಣೈ, ಯೋಗ ಗುರು ಡಾ. ರಾಘವೇಂದ್ರ ಪೈ, ಕಾರ್ಯಕ್ರಮ ಸಂಚಾಲಕ ಡಾ.ಎ.ಎಸ್. ಚಂದ್ರಶೇಖರ ಇದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.