ರಾಷ್ಟ್ರಪ್ರೇಮ ಮೂಡಿಸಿದ ನವ್ಕೀಸ್ ವಿದ್ಯಾರ್ಥಿಗಳು
ಮೈಸೂರು: ನವ್ಕೀಸ್ ಶಾಲೆಯ 3ನೇ ವಾರ್ಷಿಕೋತ್ಸವವು ಬಹಳ ವಿಜೃಂಭಣೆಯಿಂದ ಕಲಾಮಂದಿರದಲ್ಲಿ ನಡೆಯಿತು.
ಬೆಂಗಳೂರಿನ ನವ್ಕೀಸ್ ಶಾಲೆಯ ಪ್ರಾಂಶುಪಾಲರಾದ ಲಲಿತಾಮೂರ್ತಿ ಹಾಗೂ ಮೈಸೂರು ಶಾಲೆಯ ಪ್ರಾಂಶುಪಾಲೆ ವಸಂತಲತಾ ಅವರು ಕಾರ್ಯಕ್ರಮ ಉದ್ಘಾಟಿಸಿದರು.
ಮುಖ್ಯ ಅತಿಥಿಯಾಗಿದ್ದ ಪೊಲೀಸ್ ಆಯುಕ್ತ ಸುಧೀರ್ ಹಾಗೂ ವಿವಿಐಟಿ ಸಂಸ್ಥಾಪಕ ವಾಸು ಅವರು ತಮ್ಮ ಭಾಷಣದಲ್ಲಿ ಶಾಲೆಯು ನೀಡುತ್ತಿರುವ ಶಿಕ್ಷಣದ ರೀತಿ, ಉದ್ದೇಶ ಹಾಗೂ ವಿದ್ಯಾರ್ಥಿ ಕೇಂದ್ರಿತ ಶಿಕ್ಷಣದ ವಿಧಾನ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳನ್ನು ಹೊರತರಲು ನಡೆಸಲಾದ ಗೀತಗಾಯನ ಸ್ಪರ್ಧೆ, ಕಥೆ ಹೇಳುವ ಸ್ಪರ್ಧೆ, ಆಶುಭಾಷಣ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಕಸದಿಂದ ರಸ, ಚಿತ್ರಕಲೆ ಮೊದಲಾದ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ಹೆಚ್ಚು ಪ್ರಶಸ್ತಿ ಗಳಿಸಿದ ಶಾಲಾ ಗುಂಪಿನ ನಾಯಕನಿಗೆ ಟ್ರೋಫಿ ಹಸ್ತಾಂತರಿಸಲಾಯಿತು. ನಂತರ ಶಾಲಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾರತದ ಮಹಾಕಾವ್ಯ ರಾಮಾಯಣದ ನೃತ್ಯ ರೂಪಕವನ್ನು ಅಭಿನಯಿಸಿದ ವಿದ್ಯಾರ್ಥಿಗಳು, ನಮ್ಮ ನಾಡಿನ ಸಂಸ್ಕೃತಿ ಪ್ರತಿಬಿಂಬಿಸಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.