ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಹಿಂದುಳಿದ ವರ್ಗಗಳಲ್ಲಿ ಅಸಹಕಾರ

Parashurama
Updated On : 29 Jan 2013, 12:22 pm

ಮೈಸೂರು: ಪರಸ್ಪರ ಅಸಹಕಾರ ತೋರುವ ಮನೋಭಾವ ಹಿಂದುಳಿದ ವರ್ಗಗಳಲ್ಲಿ ಹೆಚ್ಚು ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯ ಕಾರ್ಯದರ್ಶಿ ಮಲ್ಲಪ್ಪಗೌಡ ಹೇಳಿದರು.
ಜಗನ್ಮೋಹನ ಅರಮನೆಯಲ್ಲಿ ಸೋಮವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ನಾಮಫಲಕ ಅನಾವರಣಗೊಳಿಸುವ ಮೂಲಕ ಮೈಸೂರು ಜಿಲ್ಲಾ ಗಾಣಿಗ ಯುವಕರ ಸಂಘ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಇತರೆ ಸಮುದಾಯದಂತೆ ಮುಂದೆ ಬರಬೇಕು ಎನ್ನುವ ಅಲೋಚನೆ ಮಾಡದೆ ಪರಸ್ಪರ ಕಾಲೆಳೆಯುವ ಮೂಲಕ ಅಸಹಕಾರ ತೋರಿಸುವಲ್ಲಿ ಹಿಂದುಳಿದ ಜನಾಂಗ ತೊಡಗಿಸಿಕೊಂಡಿರುವುದರಿಂದ ನಿರೀಕ್ಷಿತ ಪ್ರಗತಿ ಕಾಣಲು ಸಾಧ್ಯವಾಗಿಲ್ಲ. ಆದ್ದರಿಂದ ಈ ವರ್ಗಗಳು ಸಂಘಟಿತರಾಗಿ ಸಮಾಜದ ಅಭಿವೃದ್ಧಿಗೆ ಒಗ್ಗೂಡುವುದು ಅವಶ್ಯಕ ಎಂದರು.
ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಪ್ರತ್ಯೇಕ ಸಚಿವಾಲಯ ಸ್ಥಾಪಿಸಿರುವ ಸರ್ಕಾರವು 1 ಸಾವಿರ ಕೋಟಿ ಮೀಸಲಿರಿಸಿದೆ. ಆದರೆ ಅದನ್ನು ಬಳಕೆ ಮಾಡಿಕೊಳ್ಳುವಲ್ಲಿ ಈ ಸಮುದಾಯಗಳು ಕಾಳಜಿ ವಹಿಸಿಲ್ಲ.  ಹೀಗಾಗಿ ಅದೆಷ್ಟೋ ಅನುದಾನಗಳು ಸದುಪಯೋಗವಾಗದೆ ವಾಪಸ್ಸಾಗಿವೆ ಎಂದು ತಿಳಿಸಿದರು.
1.5 ಕೋಟಿ ನೀಡಲು ಮನವಿ: ಸರಸ್ವತಿಪುರಂ ಗಾಣಿಗರ ವಿದ್ಯಾರ್ಥಿ ನಿಲಯದ ಅಭಿವೃದ್ಧಿಗೆ 1.5 ಕೋಟಿ ನೀಡುವಂತೆ ಈಗಾಗಲೇ ಜನಾಂಗದ ಮುಖಂಡರ ನಿಯೋಗದೊಂದಿಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಮಾಡಲಾಗಿದೆ. ಈ ಸಾಲಿನ ಬಜೆಟ್‌ನಲ್ಲಿ ಹಣ ಬಿಡುಗಡೆಯಾಗಲಿದೆ ಎಂದು ಅವರು ಭರವಸೆ ನೀಡಿದರು.
ವಿವಿಧ ಕ್ಷೇತ್ರಗಳ ಸಾಧಕರಾದ ಕಲಾವತಿ, ಎಸ್. ಮಹದೇವಶೆಟ್ಟಿ, ಸ್ನೇಕ್ ಮಂಜುನಾಥ್, ಮಹದೇವಶೆಟ್ಟಿ, ವೆಂಕಟೇಶ್ ಹಾಗೂ ಸುನಿಲ್ ಅವರನ್ನು ಸಮಗ್ರ ಗ್ರಾಮೀಣ ಹಾಗೂ ನಗರಾಭಿವೃದ್ಧಿ ಸಂಸ್ಥೆ ನಿರ್ದೇಶಕ ಡಾ. ಬಿ.ಎಂ. ನಾಗಪ್ಪ ಸನ್ಮಾನಿಸಿದರು.
ಅಖಿಲ ಕರ್ನಾಟಕ ಎಚ್.ಡಿ. ಕುಮಾರಸ್ವಾಮಿ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಶರಾವತಿ ವೆಂಕಟೇಶ್ ಕಾರ್ಯಕ್ರಮ ಉದ್ಘಾಟಿಸಿದರು. ಯುವ ರಾಜ್ಯಾಧ್ಯಕ್ಷ ಗಿರೀಶ್ ಬಂಡಿಪಾಳ್ಯ ಮುಖ್ಯ ಅತಿಥಿಯಾಗಿದ್ದರು. ಮಾಜಿ ಮೇಯರ್ ಅನಂತ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಕುಮಾರ್, ಕೆಂಪರಾಜ್, ಶ್ರೀನಿವಾಸ್, ಶಕೀಲ್ ಮತ್ತಿತರರಿದ್ದರು. ಸಂಘದ ಅಧ್ಯಕ್ಷ ವಿ. ಮಹದೇವು ಸ್ವಾಗತಿಸಿದರು. ಟಿ. ವಿ. ನಾಗರಾಜ್ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments