ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಚಾ.ನಗರ ರೈಲು ಸಂಚಾರ ರದ್ದು

Parashurama
Updated On : 29 Jan 2013, 10:26 am

ಮೈಸೂರು:  ನಂಜನಗೂಡು- ಚಾಮರಾಜನಗರ ರೈಲು ಮಾರ್ಗದಲ್ಲಿ ದುರಸ್ತಿ ಕಾರ್ಯ ಹಮ್ಮಿಕೊಂಡಿರುವುದರಿಂದ ಜ.30ರಂದು ಮೈಸೂರು- ಚಾಮರಾಜನಗರ ರೈಲು ಸಂಚಾರ ನಂಜನಗೂಡಿನಿಂದ ಮುಂದಕ್ಕೆ ರದ್ದುಗೊಳಿಸಲಾಗಿದೆ. ಆದ್ದರಿಂದ ಮೈಸೂರು- ಚಾಮರಾಜನಗರ ರೈಲು ನಂಜನಗೂಡಿಗೆ ಕೊನೆಗೊಳ್ಳಲಿದೆ ಎಂದು ರೇಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ವಿದ್ಯುತ್ ನಿಲುಗಡೆ ಸಹಕಾರಕ್ಕೆ ಮನವಿ
ಮೈಸೂರು: ಯುಪಿಸಿಎಲ್‌ನಲ್ಲಿ ವಿದ್ಯುತ್ ಉತ್ಪಾದನೆ ಸುಧಾರಣೆಯಾಗುವ ತನಕ ಗ್ರಾಮಾಂತರ ಫೀಡರ್‌ಗಳಿಗೆ 3 ಫೇಸ್- ಹಗಲು 2 ಗಂಟೆ, ರಾತ್ರಿ 1 ಗಂಟೆ, 1 ಫೇಸ್-ರಾತ್ರಿ 4 ಗಂಟೆ. ಗ್ರಾಮಾಂತರ ಐಪಿ ಫೀಡರ್‌ಗಳಿಗೆ 3 ಫೇಸ್-ಹಗಲು 2 ಗಂಟೆ, ರಾತ್ರಿ 2 ಗಂಟೆ, ತಾಲೂಕು ಕೇಂದ್ರ- ನಿರಂತರ ಜ್ಯೋತಿ-ಮಲ್ನಾಡು ಫೀಡರ್‌ಗಳಿಗೆ 18 ಗಂಟೆ, ಜಿಲ್ಲಾ ಕೇಂದ್ರ ಫೀಡರ್‌ಗಳಿಗೆ 20 ಗಂಟೆ, ಮೈಸೂರು ನಗರ ಫೀಡರ್‌ಗಳಿಗೆ 21 ಗಂಟೆ ವಿದ್ಯುತ್ ಸರಬರಾಜುಗೆ ಉದ್ದೇಶಿಸಲಾಗಿದ್ದು, ಗ್ರಾಹಕರು ಸೆಸ್ಕ್‌ನೊಂದಿಗೆ ಸಹಕರಿಸುವಂತೆ ಕೋರಲಾಗಿದೆ.
ಝೂನಲ್ಲಿ ವಿಶ್ವನಾಥ್ ಉಪನ್ಯಾಸ ಫೆ.5ಕ್ಕೆ
ಜಲ ನಿರ್ವಹಣ ತಜ್ಞ ವಿಶ್ವನಾಥ್ ಅವರಿಂದ ನಗರ ಪ್ರದೇಶಗಳಲ್ಲಿ ಜಲ ಸಂರಕ್ಷಣೆ ಮತ್ತು ಅದರ ಪ್ರಾಮುಖ್ಯತೆ ಕುರಿತು ಫೆ.5ರ ಸಂಜೆ 4.15ಕ್ಕೆ ಮೃಗಾಲಯ ಸಭಾಂಗಣದಲ್ಲಿ ಸಂರಕ್ಷಣಾ ನುಡಿ ಏರ್ಪಡಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು 200 ಮಂದಿಗೆ ಮಾತ್ರ ಅವಕಾಶ ಇದೆ. ಮಾಹಿತಿಗೆ ದೂ. 2520302 ಸಂಪರ್ಕಿಸಲು ಮೃಗಾಲಯ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಪಿ. ರವಿ ತಿಳಿಸಿದ್ದಾರೆ.
ಇಂದು ಪ್ರತಿಭಟನೆ
ಮೈಸೂರು: ಚಿಂತಕ ಆಶಿಷ್‌ನಂದಿ ಬಂಧಿಸುವಂತೆ ಒತ್ತಾಯಿಸಿ ಜ.30ರಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ಬೆಳಗ್ಗೆ 11ಕ್ಕೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಹಾಗೂ ದಲಿತ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷ ಶಿವರಾಮು ತಿಳಿಸಿದ್ದಾರೆ.
'ವಿಶ್ವರೂಪಂ' ನಿಷೇಧಕ್ಕೆ ಇಂದು ಒತ್ತಾಯ
ಮೈಸೂರು:  'ವಿಶ್ವರೂಪಂ' ಚಿತ್ರ ನಿಷೇಧಿಸುವಂತೆ ಆಗ್ರಹಿಸಿ ಜ.30ರ ಮಧ್ಯಾಹ್ನ 3ಕ್ಕೆ ಜಿಲ್ಲಾಧಿಕಾರಿ ಕಚೇರಿ ಎದುರು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಮುಖಂಡ ಅಲ್ತಾಫ್ ಅಹಮದ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments