ನಡೆಯದ ಸಭೆ: ಇಂದು ಪ್ರತಿಭಟನೆ
ಮೈಸೂರು: ಜನವರಿ ತಿಂಗಳ ಸಭೆ ಕರೆಯದ ಮೇಯರ್ ರಾಜೇಶ್ವರಿ ವಿರುದ್ಧ ಜ.30ರ ಬೆಳಗ್ಗೆ 11ಕ್ಕೆ ಮೇಯರ್ ಕಚೇರಿ ಎದುರು ಪ್ರತಿಭಟಿಸುವುದಾಗಿ ಪಾಲಿಕೆ ಪ್ರತಿಪಕ್ಷ ನಾಯಕ ಮ.ವಿ. ರಾಮಪ್ರಸಾದ್ ಹೇಳಿದ್ದಾರೆ.
10 ಲಕ್ಷ ಬಿಡುಗಡೆ
ಮೈಸೂರು: ನರಸಿಂಹರಾಜ ವಿಧಾನಸಭಾ ಕ್ಷೇತ್ರದ ವಿವಿಧ ಜನಾಂಗದ ಸಂಘ-ಸಂಸ್ಥೆಗಳಿಗೆ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ತಲಾ 10 ಲಕ್ಷ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ಮೃಗಾಲಯ ಪ್ರಾಧಿಕಾರದ ಅಧ್ಯಕ್ಷರೂ ಆದ ಮಾಜಿ ಶಾಸಕ ಇ.ಮಾರುತಿರಾವ್ ಪವಾರ್ ಅನುದಾನ ಬಿಡುಗಡೆಗೆ ಒತ್ತಾಯಿಸಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ 10 ಸಂಘ-ಸಂಸ್ಥೆಗಳಿಗೆ ತಲಾ 10 ಲಕ್ಷ ಬಿಡುಗಡೆ ಮಾಡುವುದಾಗಿ ಶೆಟ್ಟರ್ ಭರವಸೆ ನೀಡಿದ್ದಾರೆ.
ಕವನಗಳ ಆಹ್ವಾನ
ಮೈಸೂರು: ಮೈಸೂರಿನ ಯುವತಿ ಮಹಿಳಾ ಮಂಡಳಿ, ಮಂಡ್ಯದ ಜಿಲ್ಲಾ ಸಿರಿಗನ್ನಡ ವೇದಿಕೆಯು ಯುಗಾದಿ ಕುರಿತು ರಾಜ್ಯಮಟ್ಟದ ಕವಿ-ಕಾವ್ಯ ಸಮ್ಮೇಳನ ಏರ್ಪಡಿಸಿದೆ. ರಾಜ್ಯದ ನಾನಾ ಕವಿಗಳಿಂದ ಯುಗಾದಿ ಮುನ್ನ ದಿನ ಮಂಡ್ಯದಲ್ಲಿ ನೂರೊಂದು ಕವಿತೆಗಳ ಕವನ ಸಂಕಲನ ಹಾಗೂ ಕವಿಗೋಷ್ಠಿ ಆಯೋಜಿಸಲಾಗಿದೆಂದು ಮಂಡಳಿ ಅಧ್ಯಕ್ಷೆ ಕೆ. ಮಂಜುಳಾ ರಮೇಶ್ ತಿಳಿಸಿದ್ದಾರೆ. ಆಸಕ್ತರು ಎಲ್ಲೂ ಪ್ರಕಟವಾಗಿರದ ತಮ್ಮ 3 ಕವನ, ಇತ್ತೀಚಿನ 2 ಭಾವಚಿತ್ರದೊಂದಿಗೆ ಪೋತೇರ ಮಹದೇವು, ಅಧ್ಯಕ್ಷ, ಸಿರಿಗನ್ನಡ ವೇದಿಕೆ, ಹುಲಿವಾನ ಗ್ರಾಮ ಅಂಚೆ, ಕೆರಗೋಡು ಹೋಬಳಿ, ಮಂಡ್ಯ ಈ ವಿಳಾಸಕ್ಕೆ ಫೆ.10 ರೊಳಗೆ ಕಳುಹಿಸುವಂತೆ ಕೋರಿದ್ದಾರೆ. ಮಾಹಿತಿಗೆ ಮೊ. 9739693599 ಅಥವಾ 9945247992 ಸಂಪರ್ಕಿಸಬಹುದು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.