ರಾಜ್ಯ ಬಟೆಟ್ನಲ್ಲಿ ಮೈಸೂರಿಗೆ 1000 ಕೋಟಿ ನೀಡಿ
ಮೈಸೂರು: ರಾಜ್ಯ ಸರ್ಕಾರ ಮಂಡಿಸಲಿರುವ ಆಯ-ವ್ಯಯದಲ್ಲಿ ನಗರಾಭಿವೃದ್ಧಿಗೆ 1000 ಕೋಟಿ ನೀಡಬೇಕು, ಮೋನೋ ರೇಲ್ವೆ ಕಾಮಗಾರಿ ಸರ್ವೇಗೆ ಚಾಲನೆ, ಮಲ್ಟಿಲೆವಲ್ ಪಾರ್ಕಿಂಗ್ ವ್ಯವಸ್ಥೆ, ಕಾರ್ಖಾನೆಗಳ ಪಟ್ಟಣ ಪ್ರಾಧಿಕಾರ, ಪ್ರವಾಸೋದ್ಯಮ ಪ್ರಾಧಿಕಾರ ರಚಿಸಬೇಕು ಎಂದು ಎಸಿಐಸಿಎಂ ಸಂಚಾಲಕ ಎಂ. ಲಕ್ಷ್ಮಣ್ ಒತ್ತಾಯಿಸಿದ್ದಾರೆ.
ಎಂಜಿನಿಯರ್ಗಳ ಸಂಸ್ಥೆಯಲ್ಲಿ ಮಂಗಳವಾರ ರಾಜ್ಯ ಆಯ-ವ್ಯಯ ಕುರಿತ ಸಲಹೆ ಮತ್ತು ಬೇಡಿಕೆಗಳ ಪಟ್ಟಿ ಕುರಿತು ನಡೆದ ಚರ್ಚೆಯಲ್ಲಿ ಮಾತನಾಡಿದ ಅವರು, ಮೈಸೂರು ನಗರವನ್ನು ಪಾರಂಪರಿಕ ನಗರ ಮತ್ತು ಬೃಹತ್ ಮೈಸೂರು ನಗರವೆಂದು ಘೋಷಿಸಬೇಕು, ಪ್ರಮುಖ ರಸ್ತೆಯನ್ನು ಮೇಲ್ದರ್ಜೆಗೇರಿಸಬೇಕು, ನಗರದಲ್ಲಿ ಒತ್ತುವರಿಯಾದ 110 ಕೆರೆಗಳ ಸಂರಕ್ಷಣೆ, ಜೀರ್ಣೋದ್ಧಾರ, ಐದು ಜಿಲ್ಲೆಯನ್ನು ಒಳಗೊಂಡಂತೆ ಮೆಟ್ರೋ ಅಥವಾ ಮೋನೋ ರೇಲ್ವೆ ಕಾಮಗಾರಿ ಸರ್ವೇ ಕೆಲಸಕ್ಕೆ ಚಾಲನೆ ಸಿಗಬೇಕು ಎಂದು ಒತ್ತಾಯಿಸಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಮೈಸೂರು - ಮಳವಳ್ಳಿ ನಡುವಿನ 42 ಕಿ.ಮೀ. ಉದ್ದದ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತಿಸಬೇಕು, ಅಲ್ಪಸಂಖ್ಯಾತರ ವಿದ್ಯಾರ್ಥಿನಿಲಯಗಳ ನಿರ್ಮಾಣ ಮತ್ತು ಕೌಶಲ್ಯ ಅಭಿವೃದ್ಧಿ ಆಗಬೇಕು. ನಗರದಲ್ಲಿ ಕನಿಷ್ಟ 25 ಕಡೆ ಬಹು ಮಹಡಿ ಪಾರ್ಕಿಂಗ್ ವ್ಯವಸ್ಥೆ, ನಗರಕ್ಕೆ 10 ಹೆಚ್ಚುವರಿ ಪೊಲೀಸ್ ಠಾಣೆ, ಡಿಸಿಪಿ ಹುದ್ದೆಯನ್ನು ಐಪಿಎಸ್ಗೆ ಏರಿಸಬೇಕು, ಎಂಡಿಎ ನಿವೇಶನ ಆಕಾಂಕ್ಷಿಗಳಿಗೆ ನಿವೇಶನ ಹಂಚಿಕೆ ಆಗಬೇಕು ಎಂದು ಆಗ್ರಹಿಸಿದ್ದಾರೆ. ನಂಜನಗೂಡಿನಲ್ಲಿ ಟೆಕ್ಸ್ಟೈಲ್ ಪಾರ್ಕ್ ರಚನೆ, ಪಿರಿಯಾಪಟ್ಟಣ ಮತ್ತು ಹುಣಸೂರಿನಲ್ಲಿ ಕಾಫಿ ರಫ್ತು ಕೇಂದ್ರ ಅ21 ಫ್ಲೇವರ್ಸ್ ಒಳಗೊಂಡ ಕೇಂದ್ರ ತೆರೆಯಬೇಕು ಎಂದರು.
ತಾಲೂಕು ಕೇಂದ್ರಗಳಲ್ಲಿ ಸುಸಜ್ಜಿತ ಮಾರುಕಟ್ಟೆ ನಿರ್ಮಿಸಬೇಕು, ದೇವರಾಜ, ಮಂಡಿ ಮತ್ತು ವಾಣಿವಿಲಾಸ ಮಾರುಕಟ್ಟೆ ಜೀರ್ಣೋದ್ಧಾರ ಮಾಡಬೇಕು, ನಗರದಲ್ಲಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ತೆರೆಯಬೇಕು, ಕೆ.ಆರ್. ಆಸ್ಪತ್ರೆಯಲ್ಲಿ ಮಾನಸಿಕ ರೋಗಿಗಳ ಆಸ್ಪತ್ರೆ ಮತ್ತು ಟ್ರಾಮ ಕೇಂದ್ರ ಸ್ಥಾಪಿಸಬೇಕು, ಹಾಸನ ಮತ್ತು ಮಂಡ್ಯದಲ್ಲಿ ಐಐಟಿ ಕಾಲೇಜು, ನಂಜನಗೂಡು ಮತ್ತು ಎಚ್.ಡಿ. ಕೋಟೆಯಲ್ಲಿ ಬಯೋಟೆಕ್ ಪಾರ್ಕ್ ನಿರ್ಮಾಣ, ಮೈಸೂರಿನಲ್ಲಿ ಐಟಿ ಪಾರ್ಕ್ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು.
ಮೈಸೂರು, ಮಂಡ್ಯ, ಮಡಿಕೇರಿ, ಹಾಸನ ಮತ್ತು ಚಾಮರಾಜನಗರ ಜಿಲ್ಲೆಯನ್ನು ಒಳಗೊಂಡ ಸರ್ಕ್ಯೂಟ್ ಪ್ರವಾಸೋದ್ಯಮ ಪ್ರಾಧಿಕಾರ ರಚಿಸಿ 500 ಕೋಟಿ ಮೀಸಲಿಡಬೇಕು, ಚಾಮುಂಡಿ ಬೆಟ್ಟದ ಸುತ್ತಲಿನ ಪ್ರದೇಶವನ್ನು ಹಸಿರು ವಲಯ ಎಂದು ಘೋಷಿಸಿ ರಕ್ಷಿಸಬೇಕು, ವಿಮಾನ ನಿಲ್ದಾಣ ಮೇಲ್ದರ್ಜೆಗೇರಿಸಬೇಕು, ಮೈಸೂರು ಸಾಂಪ್ರದಾಯಿಕ ಚಿತ್ರಕಲೆ, ವಸ್ತುಗಳಿಗೆ ಪ್ರಚಾರ ಪಡಿಸಬೇಕು ಎಂದು ಸಿಎಂ ಅವರಲ್ಲಿ ಮನವಿ ಮಾಡಿದ್ದಾರೆ.
ಸಭೆಯಲ್ಲಿ ಎಂಜಿನಿಯರ್ಗಳ ಸಂಸ್ಥೆ ಅಧ್ಯಕ್ಷ ಪದ್ಮನಾಭ್, ಮಾಜಿ ಅಧ್ಯಕ್ಷ ಎ.ಎಸ್. ಸತೀಶ್, ಟಿ.ಎಸ್.ಸತ್ಯನಾರಾಯಣ್, ಸಂಪತ್ತು, ಸಿ.ಎನ್.ಬಾಬು, ಮೈಸೂರು ಕನ್ನಡ ವೇದಿಕೆಯ ಬಾಲಕೃಷ್ಣ ಇತರರು ಇದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.