ಎಲ್ಪಿಜಿ ಗ್ರಾಹಕರಿಗೆ ಸಬ್ಸಿಡಿ ನೇರ ವರ್ಗಾವಣೆ
ಕ.ಪ್ರ.ವಾರ್ತೆ , ಮೈಸೂರು , ಜು. 1
ಎಲ್ಪಿಜಿ ಗ್ರಾಹಕರಿಗೆ ಸಹಾಯಧನ ನೇರ ವರ್ಗಾವಣೆ ವ್ಯವಸ್ಥೆಗೆ ಸೋಮವಾರ ಮೈಸೂರಿನಲ್ಲಿ ಚಾಲನೆ ನೀಡಲಾಯಿತು.
ಜಿಲ್ಲೆಯಲ್ಲಿ ಎಲ್ಪಿಜಿ ಗ್ರಾಹಕರು ಈಗಾಗಲೇ ಸಬ್ಸಿಡಿಯನ್ನು ನೇರವಾಗಿ ಬ್ಯಾಂಕ್ ಖಾತೆಯಲ್ಲಿ ಪಡೆಯಲು ಆಧಾರ್ ಸಂಖ್ಯೆ, ಎಲ್ಪಿಜಿ ಗ್ರಾಹಕರ ಸಂಖ್ಯೆಯನ್ನು ಸಲ್ಲಿಸಿದ್ದಾರೆ.
ಹೀಗಾಗಿ ಮೈಸೂರು ಜಿಲ್ಲೆಯ ಗ್ರಾಹಕರು ಸೋಮವಾರದಿಂದ ಸೌಲಭ್ಯ ಪಡೆಯಲಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ. ರಾಮೇಗೌಡ ತಿಳಿಸಿದ್ದಾರೆ.
ಮೈಸೂರು ಜಿಲ್ಲೆಯಲ್ಲಿ 5,18,504 ಎಲ್ಪಿಜಿ ಗ್ರಾಹಕರು ಹೊಸ ವ್ಯವಸ್ಥೆಗೆ ಸೇರ್ಪಡೆಯಾಗಿದ್ದಾರೆ. ಗ್ರಾಹಕರೆಲ್ಲರೂ ಈಗಾಗಲೇ ಮೂಲ ದಾಖಲಾತಿಗಳನ್ನು ಸಲ್ಲಿಸಿದ್ದಾರೆ. ಶೇ. 78 ಮಂದಿ ಗ್ರಾಹಕರ ಬ್ಯಾಂಕ್ ಖಾತೆ, ಆಧಾರ್ ಸಂಖ್ಯೆ ಸಮೀಕರಣವಾಗುತ್ತಿವೆ. ಸಬ್ಸಿಡಿ ಹಣವಾದ 435 ಬ್ಯಾಂಕ್ ಖಾತೆಗೆ ಜಮಾ ಆಗಲಿದೆ ಎಂದು ಮಾಹಿತಿ ನೀಡಿದರು.